Header Ads
Header Ads
Breaking News

ಕೇಂದ್ರದ ಸಿ.ಆರ್.ಎಫ್ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ತಡೆಹಿಡಿದ ರಾಜ್ಯ ಸರಕಾರ:  ಶಾಸಕ ಎಸ್. ಅಂಗಾರ ಆರೋಪ

ಕೇಂದ್ರ ರಸ್ತೆ ನಿಧಿ ಯೋಜನೆಯಡಿಯಲ್ಲಿ ಕರ್ನಾಟಕಕ್ಕೆ 3589 ಕೋಟಿ ರೂ ಕೇಂದ್ರದಿಂದ ಬಿಡುಗಡೆಯಾಗಿದೆ. ಈ ಅನುದಾನ 662 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿತ್ತು. ಆದರೆ ರಾಜ್ಯ ಸರ್ಕಾರ ಕೇವಲ 500 ಕೋಟಿಯ ಕಾಮಗಾರಿಗಳನ್ನು ಮಾಡಬೇಕು ಎಂದು ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಸುಮಾರು ೩೦೮೯ ಕೋಟಿ ಕೇಂದ್ರದ ಅನುದಾನವನ್ನು ರಾಜ್ಯ ಸರಕಾರ ಬದಲಿ ಕಾಮಗಾರಿಗಳಿಗೆ ಬಳಸಿಕೊಂಡಿದೆ. ರಾಜ್ಯದಲ್ಲಿ ಅನುದಾನದ ಕೊರತೆಯಿಂದಾಗಿ ಸಿ.ಆರ್.ಎಫ್ ಯೋಜನೆಯ ರಸ್ತೆಗಳ ಅಭಿವೃದ್ದಿ ಕಾಮಗಾರಿ ಕುಂಠಿತಗೊಂಡಿದೆ ಎಂದು ಶಾಸಕ ಎಸ್. ಅಂಗಾರ ಆರೋಪಿಸಿದ್ದಾರೆ.

ಅವರು ಸುಳ್ಯದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿ ಸುಳ್ಯ ತಾಲೂಕಿನಲ್ಲಿ ಕೇಂದ್ರ ರಸ್ತೆ ನಿಧಿ ಯೋಜನೆಯಡಿ 4 ರಸ್ತೆಗಳು ಮಂಜೂರುಗೊಂಡಿತ್ತು. ಕಾಂತಮಂಗಲ – ಅಜ್ಜಾವರ ರಸ್ತೆಗೆ 6 ಕೋಟಿ ಮತ್ತು ಸುಳ್ಯ ಉಬರಡ್ಕ ರಸ್ತೆ ಅಗಲೀಕರಣಕ್ಕೆ 2 ಕೋಟಿ ಸೇರಿ 8ಕೋಟಿ ಅನುದಾನ ಮಂಜೂರು ಆಗಿತ್ತು. ಅಲ್ಲದೇ ಅಯ್ಯನಕಟ್ಟೆ-ಬೇಂಗಮಲೆ ರಸ್ತೆಗೆ 3 ಕೋಟಿ, ಅರಂತೋಡು-ಎಲಿಮಲೆ ರಸ್ತೆ 3.5 ಕೋಟಿ ಅನುದಾನ ಬಿಡುಗಡೆಗೊಂಡಿತ್ತು. ಇದೇ ಜನವರಿ 16 ರಂದು ಟೆಂಡರ್‌ನ್ನು ಆರಂಭಿಸಬೇಕಾಗಿತ್ತು. ಆದರೆ ರಾಜ್ಯ ಸರಕಾರದ ಆದೇಶದಂತೆ ಟೆಂಡರ್ ಪ್ರಕ್ರಿಯೇಗೆ ತಡೆಹಿಡಿಯುವ ಕೆಲಸ ಮಾಡಿದೆ. ಅದು ಅಲ್ಲದೇ ಬಿಜೆಪಿ ಶಾಸಕರು ಇರುವ ತಾಲೂಕುಗಳಿಗೆ ಅನುದಾನದಲ್ಲಿ ತಾರತಮ್ಯ ಮಾಡುವ ಕೆಲಸ ಕಳೆದ 5 ವರ್ಷದಿಂದ ರಾಜ್ಯದ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.

Related posts

Leave a Reply