Header Ads
Breaking News

ಕೇಂದ್ರ ತಪ್ಪನ್ನು ತಿದ್ದಿ ಭಾರತದ ಮಾನ ಹರಾಜಾಗುವುದನ್ನು ತಪ್ಪಿಸಲಿ; ಸಸಿಕಾಂತ್ ಸೆಂಥಿಲ್

ಕೇಂದ್ರ ಸರಕಾರ ಆದಷ್ಟು ಬೇಗ ಪೌರತ್ವ ತಿದ್ದುಪಡಿ ಮಸೂದೆ ತಮ್ಮ ತಪ್ಪನ್ನು ಅರ್ಥಮಾಡಿಕೊಂಡು ತಿದ್ದಿಕೊಂಡು ಮಾನವನ್ನು ಉಳಿಸಿಕೊಳ್ಳಲಿ, ಕಾಪಾಡಿಕೊಳ್ಳಲಿ. ಸರಕಾರ ನೀವು ನಡೆಸುವುದಾದರೂ ದೇಶದ ಮಾನ ಹರಾಜಾದರೆ ನಮ್ಮದೂ ಮಾನ ಹೋದಂತೆ. ಆ ನಿಟ್ಟಿನಲ್ಲಿ ಒಂದು ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳಿ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಪೌರತ್ವ ಸಂರಕ್ಷಣಾ ಸಮಿತಿ ಮುಡಿಪು ವತಿಯಿಂದ ಮುಡಿಪು ಮಹಾತ್ಮಾಗಾಂಧೀನಗರದ ಡಾ. ಬಿ.ಆರ್. ಅಂಬೇಡ್ಕರ್ ವೇದಿಕೆಯಲ್ಲಿ ನಡೆದ ಸಂವಿಧಾನದ ಉಳಿವಿಗಾಗಿ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ದಿನಗಳು ಕಳೆಯುತ್ತಾ ಹೋದಂತೆ ಕೇಂದ್ರ ಸರಕಾರ ನೂತನ ಮಸೂದೆಗಳ ಕುರಿತಾಗಿ ಬೇರೆ ಬೇರೆ ರೂಪದಲ್ಲಿ ಹೆಸರು ಬದಲಾಯಿಸುವ ಪ್ರಯತ್ನ ನಡೆಸುತ್ತಿದ್ದು ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಶಾಸಕ ಯು.ಟಿ. ಖಾದರ್ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಬೆಂಗಳೂರಿನ ನ್ಯಾಯಪಥ ಪತ್ರಿಕೆಯ ಸಂಪಾದಕ ಡಾ. ವಾಸು ಎಚ್.ವಿ, ಬೆಂಗಳೂರಿನ ಸಾಮಾಜಿಕ ಹೋರಾಟಗಾರ್ತಿ ಭವ್ಯ ನರಸಿಂಹ ಮೂರ್ತಿ, ಚಿಂತಕಿ ನಝ್ಮಾ ಚಿಕ್ಕನೇರಳೆ, ಉಡುಪಿ ಸಂತುಕ್ತ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್, ಡಿವೈಎಫ್ ಐ ಮುಖಂಡ ಜೀವನ್ ಕುತ್ತಾರು ಮೊದಲಾದವರು ಹಾಜರಿದ್ದರು.

Related posts

Leave a Reply

Your email address will not be published. Required fields are marked *