Header Ads
Header Ads
Breaking News

ಕೇಂದ್ರ ಬಜೆಟ್‌ನಲ್ಲಿ ಮೀನುಗಾರರ ಅನೇಕ ವರ್ಷಗಳ ಬೇಡಿಕೆ ಈಡೇರಿದಂತಾಗಿದೆ : ಪ್ರಮೋದ್ ಮಧ್ವರಾಜ್ ಹೇಳಿಕೆ

ಕೇಂದ್ರ ಬಜೆಟ್‌ನಲ್ಲಿ ಮೀನುಗಾರಿಕೆಗೂ ಸಚಿವಾಲಯ ಘೋಷಿಸಿದ್ದು ,ಮೀನುಗಾರರ ಅನೇಕ ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಆದರೆ ಬರೀ ಸಚಿವಾಲಯ ಬಂದರಷ್ಡೇ ಸಾಲದು. ಅದಕ್ಕೆ ಬೇಕಾದ ಅನುದಾನವೂ ಬರಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿ, ಈ ಮೊದಲು ಯುಪಿಎ ಸರಕಾರ ಇದ್ದಾಗ ಮೀನುಗಾರಿಕೆಗೆ ಎಪ್ಪತ್ತೈದು ಶೇ ಮತ್ತು ರಾಜ್ಯ ಸರಕಾರ ಇಪ್ಪತ್ತೈದು ಶೇ.ಅನುದಾನ ನೀಡುತ್ತಿತ್ತು. ಆದರೆ ಎನ್‌ಡಿಎ ಸರಕಾರ ಬಂದ ಬಳಿಕ ಅದು ತಲಾ ಐವತ್ತು ಶೇಖಡಾಕ್ಕೆ ಸೀಮಿತವಾಗಿದೆ. ಹೀಗಾಗಿ ಯಾವುದೇ ಯೋಜನೆಗಳಿಗೂ ಹತ್ತು ಕೋಟಿಗಿಂತ ಹೆಚ್ಚು ಅನುದಾನ ಬರುತ್ತಿರಲಿಲ್ಲ. ಕೇವಲ ನಾಮ್ ಕೆವಾಸ್ತೆಗೆ ಸಚಿವಾಲಯ ಘೋಷಣೆ ಮಾಡದೆ, ಅದಕ್ಕೆ ಹೆಚ್ಚಿಗೆ ಎಷ್ಟು ಹಣವನ್ನು ಮೀಸಲಿಡುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಲಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಕೇಂದ್ರ ಬಜೆಟ್ ನಲ್ಲಿ ಮೀನುಗಾರಿಕೆಗೂ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಿದ್ದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಈತನಕ ಕೇಂದ್ರ ಕೃಷಿ ಸಚಿವಾಲಯದಡಿ ಮೀನುಗಾರಿಕೆ ಇಲಾಖೆ ಕಾರ್ಯನಿರ್ವಹಿಸುತ್ತಿತ್ತು ಎಂದರು.

Related posts

Leave a Reply