Header Ads
Header Ads
Breaking News

ಕೇಂದ್ರ ಬಜೆಟ್ – ದೇಶದ ಅಭಿವೃದ್ಧಿ, ರೈತ ವರ್ಗದ ಅಭಿವೃದ್ಧಿಯ ಚಿಂತನೆ ಇಲ್ಲ : ಗೋಪಾಲ ಭಂಡಾರಿ ಹೇಳಿಕೆ

ಕಾರ್ಕಳ : ಕೇಂದ್ರದ ಬಿಜೆಪಿ ಸರಕಾರ 2019ರ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ಲೇಖಾನುದಾನವನ್ನು ಮಂಡಿಸಿದೆ. ಇದು ಒಂದು ಅರ್ಥದಲ್ಲಿ ಬಿಜೆಪಿಯ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಂತಿದ್ದು, ಇದರಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಮಧ್ಯಮ ಹಾಗೂ ರೈತವರ್ಗದ ಅಭಿವೃದ್ಧಿಯ ಚಿಂತನೆ ಇಲ್ಲ ಎಂದು ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ ಹೇಳಿದ್ದಾರೆ.

ಅವರು ಕಾರ್ಕಳದಲ್ಲಿ ತಮ್ಮ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿ, ವಾರ್ಷಿಕ ರೂ. 6000/- ರೈತರಿಗೆ ನೀಡುವುದು ಅವರಿಗೆ ಮಾಡಿದ ಘೋರ ಅಪಮಾನವೇ ಹೊರತು ಗೌರವವಲ್ಲ. ಬಿಜೆಪಿ ರೈತರ ಅಭಿವೃದ್ಧಿ ಬಗ್ಗೆ ಕರ್ನಾಟಕದ ಸಮ್ಮಿಶ್ರ ಸರಕಾರ ರೈತರ ಸಾಲಮನ್ನಾಕ್ಕಾಗಿ 48000 ಕೋಟಿ ನೀಡಿರುವುದನ್ನು ಮಾನದಂಡವಾಗಿ ಪರಿಗಣಿಸಬೇಕಿತ್ತು. 2.00 ಕೋಟಿ ಉದ್ಯೋಗದ ಭರವಸೆ ಈ ಬಜೆಟ್‍ನಲ್ಲಿಯೂ ಹುಸಿಯಾಗಿದ್ದು, ಕಳೆದ 5 ವರ್ಷಗಳಲ್ಲಿ 48% ಉದ್ಯೋಗ ಸೃಷ್ಟಿ ಇಳಿಕೆಯಾಗಿರುವುದು ಇವರ ಆಡಳಿತ ವ್ಯೈಪಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

Related posts

Leave a Reply