Header Ads
Breaking News

ಕೇಂದ್ರ ಬಜೆಟ್ ಸಾಮಾನ್ಯ ಜನರಲ್ಲಿ ವಿಶ್ಚಾಸ ಮೂಡಿಸಿದೆ : ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ

ಕೇಂದ್ರ ಬಜೆಟ್ ಸಾಮಾನ್ಯ ಜನರಲ್ಲಿ ವಿಶ್ವಾಸ ಮೂಡಿಸಿದ ಐತಿಹಾಸಿಕ ದಾಖಲೆ. ಇದೊಂದು ದೂರಗಾಮಿ ಬಜೆಟ್ ಅಂತ ಮುಜರಾಯಿ, ಮೀನುಗಾರಿಕಾ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ,. ಉಡುಪಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮಂಡಿಸಿದ ಬಜೆಟ್ ನಲ್ಲಿ ಗ್ರಾಮೀಣಾಭಿವೃದ್ಧಿ ಗೆ ಒಂದುಕಾಲು ಲಕ್ಷ ಕೋಟಿ ಮೀಸಲಿರಿಸಿದೆ, ಆಯುಷ್ಮಾನ್ ಭಾರತ್ ಯೋಜನೆಯಡಿ 112 ಜಿಲ್ಲೆಯಲ್ಲಿ ಆಸ್ಪತ್ರೆ ತೆರೆಯಲಾಗ್ತಿದೆ, ಕಾಶ್ಮೀರ ಕ್ಕೆ 37 ಸಾವಿರ ಕೋಟಿ ಮೀಸಲಿರಿಸಲಾಗಿದೆ. ಇದರಿಂದ ಕಾಶ್ಮೀರದ ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ 370 ರದ್ದತಿಯಿಂದ ಜನರ ಮೇಲೆ ಆಗುವ ಪರಿಣಾಮಕ್ಕೆ ಅನುಕೂಲವಾಗಲಿದೆ, ಜೊತೆಗೆ ಕಿಸಾನ್ ರೈಲು ಬಿಡುಗಡೆ ಮಾಡಿರೋದು ಸ್ವಾಗತಾರ್ಹ. ದೇಶದ ಬರಗಾಲ ಪ್ರಭಾವಿತ ಪ್ರದೇಶಗಳಲ್ಲಿ ನೀರಿನ ಮೂಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.ಬಜೆಟ್ ನಲ್ಲಿ ರಾಷ್ಟ್ರೀಯ ಭದ್ರತೆಗೆ ಒತ್ತುಕೊಡಲಾಗಿದೆ ಎಂದ್ರು. ಇನ್ನು ಸಚಿವ ಸಂಪುಟ ವಿಸ್ತರಣೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ, ಸಿಎಂ ಯಡಿಯೂರಪ್ಪ ಅವರ ತೀರ್ಮಾನ ವನ್ನು ನಾವೆಲ್ಲಾ ಒಟ್ಟಾಗಿ ಒಂದಾಗಿ ಸ್ವಾಗತ ಮಾಡ್ತೇವೆ. ಸುಭದ್ರ ಸರ್ಕಾರವೊಂದೇ ನಮ್ಮ ಮುಂದಿನ ಗುರಿ. ಸೋತವರಿಗೆ ಸ್ಥಾನಮಾನ ಕೊಡುವ ಬಗ್ಗೆ ಶ್ರೀನಿವಾಸ ಪೂಜಾರಿ ಏನು ಹೇಳೋಕೆ ಸಾಧ್ಯ. ನಾನು ಮಂತ್ರಿಯಾಗಿ ಶೃದ್ದೆಯಿಂದ ಕೆಲಸ ಮಾಡಿದ್ದೇನೆ. ಒಂದಿಷ್ಟು ಖಾತೆ ಪಾರ್ಟಿಗೆ ಬರುವವರಿಗೆ ಅಂತ ಸಿಎಂ ಮೀಸಲಿಟ್ಟಿದ್ದಾರೆ. ಈಗ ಅದರ ಪ್ರಕ್ರಿಯೆ ಗಳು ಆರಂಭವಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್, ಸಿಎಂ ಯಡಿಯೂರಪ್ಪ ತೀರ್ಮಾನ ಮಾಡ್ತಾರೆ. ಎಲ್ಲಾ ಸಮಸ್ಯೆ ಪರಿಹಾರ ಆಗುವ ವಿಶ್ವಾಸ ಇದೆ. ಸರ್ಕಾರ ಸಮರ್ಥವಾಗಿ ಕೆಲಸ ಮಾಡ್ತಾ ಇದೆ. ಸಿಎಂ ಜವಾಬ್ದಾರಿಯುತವಾಗಿ ಎಲ್ಲವನ್ನೂ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ರು.

Related posts

Leave a Reply

Your email address will not be published. Required fields are marked *