Header Ads
Breaking News

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ

ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜಾನಾಥ್ ಸಿಂಗ್ ಸೋಮವಾರ ಸಂಜೆ ಭೇಟಿ ನೀಡಿ ನೀಡಿದರು. ಸಚಿವರನ್ನು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ವಾಸುದೇವ ಆಸ್ರಣ್ಣ ಸ್ವಾಗತಿಸಿದರು. ಈ ಸಂದರ್ಭ ದೇವರಿಗೆ ವಿಶೇಷ ಆರತಿ ಬೆಳಗಲಾಯಿತು. ಕ್ಷೇತ್ರದ ಅರ್ಚಕರು ಕ್ಷೇತ್ರದ ಮಾಹಿತಿಯನ್ನು ನೀಡಿದರು. ತೀರ್ಥ ಪ್ರಸಾದ ಸ್ವಿಕರಿಸಿದ ಸಚಿವರು ಗರ್ಭ ಗುಡಿಗೆ ಪ್ರದಕ್ಷಿಣೆ ಬಂದು ಸಚಿವರಿಗೆ ತೀರ್ಥ ಪ್ರಸಾದ ಹಾಗೂ ದೇವರ ಶೇಷ ವಸ್ತ್ರ ಹಾಗೂ ದೇವರ ಬೆಳ್ಳಿಯ ಬಾವಚಿತ್ರನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು , ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ್, ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ ,ವೆಂಕಟರಮಣ ಆಸ್ರಣ್ಣ , ಕಮಲಾದೇವಿ ಪ್ರಸಾದ ಆಸ್ರಣ್ಣ , ಹರಿನಾರಾಯಣದಾಸ ಆಸ್ರಣ್ಣ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *