Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಕೇಂದ್ರ ರಾಜ್ಯ ಸರಕಾರಗಳ ನೀತಿ ವಿರೋಧಿಸಿ ರಮೇಶ್ ಚೆನ್ನಿತ್ತಲ ರವರ ರಣ ಕಹಳೆ ಯಾತ್ರೆಗೆ ನಾಳೆ ಉಪ್ಪಳದಿಂದ ಚಾಲನೆ

ಮಂಜೇಶ್ವರ: ಕೇಂದ್ರ ರಾಜ್ಯ ಸರಕಾರಗಳ ನೀಟಿಯನ್ನು ವಿರೋಧಿಸಿ ಪ್ರತಿಪಕ್ಷ ನಾಯಕ ರಮೆಶ್ ಚೆನ್ನಿತ್ತಲ ರವರ ಮುಂದಾಳತ್ವದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ರನ ಕಹಳೆ ಯಾತ್ರೆಗೆ ಸಿದ್ದತೆಗಳು ಪೂರ್ಣಗೊಂಡಿರುವುದಾಗಿ ಯುಡಿ‌ಎಫ್ ನೇತಾರರು ಸುದ್ದಿ ಗೋಷ್ಟಿಯಲ್ಲಿ ತಿಳಿಸಿದ್ದಾರೆ.

 

ನಾಳೆ ನವಂಬರ್ 1 ರಂದು ಉಪ್ಪಳದಲ್ಲಿ ಯಾತ್ರೆಗೆ ಮಾಜಿ ಕೇಂದ್ರ ಸಚಿವ ಹಾಗೀ ಎ ಐ ಸಿ ಸಿ ನಿರ್ವಾಹಕ ಸಮಿತಿ ಸಸದಸ್ಯ ಎ ಕೆ ಆಂಟನಿ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ.
ಮಾಜಿ ಮುಖ್ಯ ಮಂತ್ರಿ ಉಮ್ಮನ್ ಚಾಂಡಿ, ಪಾಣಕ್ಕಾಡ್ ಸಯ್ಯದಲಿ ಹೈದರಲಿ ಶಿಹಾಬ್ ತಂಘಲ್, ಎಂ. ಎಂ. ಹಸನ್, ಕೆ ಎ ಮಜೀದ್, ಸಂಸದ ವಿರೇಂದ್ರ ಕುಮಾರ್ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಡಿಸಂಬರ್ 1 ಕ್ಕೆ ತಿರುವನಂತಪುರದಲ್ಲಿ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.
ಸುದ್ದಿ ಗೋಷ್ಟಿಯಲ್ಲಿ ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ ಸೇರಿದಂತೆ ಹಲವರು ಪಾಲ್ಗೊಂಡರು.

Related posts

Leave a Reply