Header Ads
Breaking News

ಕೇಂದ್ರ ರಾಜ್ಯ ಸರಕಾರದ ಭೂ ಮಸೂದೆ ಕಾಯ್ದೆಗೆ ವಿರೋಧ-ಉಡುಪಿಯಲ್ಲಿ ಕಾಂಗ್ರೆಸ್‌ನಿಂದ ಸಹಿ ಸಂಗ್ರಹ ಅಭಿಯಾನ

ಉಡುಪಿ ಜಿಲ್ಲಾ ಕಾಂಗ್ರೆಸ್ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೆ ತಂದಿರುವ ಭೂಮಸೂದೆ ಕಾಯ್ದೆಯನ್ನು ವಿರೋಧಿಸಿದ್ದು ಈಗಾಗಲೇ ಜಿಲ್ಲೆಯಲ್ಲಿ ಲಕ್ಷಕ್ಕೂ ಅಧಿಕ ಸಹಿ ಸಂಗ್ರಹದ ಗುರಿ ಹೊಂದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಮಸೂದೆ ಕಾಯ್ದೆ ಕೃಷಿ ಕಾರ್ಮಿಕರಿಗೆ ಮತ್ತು ರೈತರಿಗೆ ಮಾರಕವಾಗಿದ್ದು, ಎ.ಪಿಎಂಸಿ ಕಾಯ್ದೆಯ ವಿರುದ್ದ ಈಗಾಗಲೇ ದೇಶದ ಪ್ರತೀ ಗ್ರಾಮದಲ್ಲೂ ಸಹಿ ಸಂಗ್ರಹ ಅಭಿಯಾನ ನಡೆದಿದೆ. ಉಡುಪಿ ಜಿಲ್ಲೆಯಲ್ಲೂ ಈ ಕಾಯಿದೆ ವಿರೋಧಿಸಿ ಜಿಲ್ಲೆಯ ಭೂತ್ ಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆದಿದ್ದು ಈಗಾಗಲೇ ಒಂದು ಲಕ್ಷದ ಹತ್ತು ಸಾವಿರ ಸಹಿ ಸಂಗ್ರಹದ ಗುರಿ ಹೊಂದಲಾಗಿದೆ. ಈಗಗಾಲೇ 70ಶೇಕಡಾ ಸಹಿ ಸಂಗ್ರಹ ಕಾರ್ಯ ಮುಗಿದಿದ್ದು ನವೆಂಬರ್ 17ರಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹಮ್ಮದ್ ಅವರಿಗೆ ಈ ಸಹಿ ಸಂಗ್ರಹವನ್ನು ಹಸ್ತಾಂತರಿಸಲಾಗುವುದು. ದೇಶದಾದ್ಯಂತ ಹಮ್ಮಿಕೊಳ್ಳಲಾದ ಸಹಿ ಸಂಗ್ರಹವನ್ನು ಸೋನಿಯಾಗಾಂಧಿ ಅವರ ನೇತೃತ್ವದಲ್ಲಿ ರಾಷ್ಟ್ರಪತಿಗಳಿಗೆ ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕೀರ್ತಿ ಶೆಟ್ಟಿ, ಪ್ರಶಾಂತ್ ಜತ್ತನ್ನ, ಹರೀಶ್ ಕಿಣಿ ಉಪಸ್ಥಿತರಿದ್ದರು.

ವರದಿ: ಪಲ್ಲವಿ ಸಂತೋಷ್ ಉಡುಪಿ

Related posts

Leave a Reply

Your email address will not be published. Required fields are marked *