Header Ads
Header Ads
Breaking News

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಪೇಜಾವರ ಶ್ರೀ ಸಂತಾಪ

ಅನಂತ ಕುಮಾರ್ ನಿಧನದಿಂದ ಅತ್ಯಂತ ವಿಷಾದವಾಗಿದೆ. ಕೇಂದ್ರ ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ಬಹುಮುಖವಾದ ಸೇವೆಯನ್ನು ಸಲ್ಲಿಸಿದ್ದರು ಅಂತ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಶ್ರೀಪದರು ಸಂತಾಪ ವ್ಯಕ್ತಪಡಿಸಿದ್ದಾರೆ. ಅನಂತ ಕುಮಾರ್ ಧೀಮಂತ ನೇತಾರರಾಗಿದ್ದರು.ಪೇಜಾವರ ಮಠದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರು.ಪರ್ಯಾಯದ ಅವಧಿಯಲ್ಲಿ ನಿರ್ಮಾಣಗೊಂಡ ಕನಕ ಮಂಟಪ, ಪಾಜಕ ಕ್ಷೇತ್ರದ ಅಭಿವೃದ್ಧಿ ಗೆ ನೆರವಾಗಿದ್ದರು.ಅನೇಕ ಯೋಜನೆಗಳಿಗೆ ಸರಕಾರದಿಂದ ಸಹಾಯ ಕೊಡಿಸಿದ್ದರು.ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಸೇವೆ ದೊರೆಯುವ ನಿರೀಕ್ಷೆಯಿತ್ತು.ಅಕಾಲಿಕ ನಿಧನದಿಂದ ರಾಜ್ಯಕ್ಕೆ ಅಪಾರ ನಷ್ಟವಾಗಿದೆ. ಭಗವಂತನು ಮೃತರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಅಂತ ಸಂತಾಪ ಸೂಚಿಸಿದರು.

Related posts

Leave a Reply