Header Ads
Header Ads
Breaking News

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ: ಸಂಸದ ನಳಿನ್ ಸಂತಾಪ

ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನಕ್ಕೆ ದ.ಕ. ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲು ಸಂತಾಪ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿರುವ ಸಂಸದ ನಳಿನ್ ಕುಮಾರ್, ಅನಂತ್ ಕುಮಾರ್ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ. ಸಚಿವರಾಗಿದ್ದಾಗ ಜಿಲ್ಲೆಗೆ ಅತಿ ಹೆಚ್ಚು ಕೊಡುಗೆಗಳನ್ನು ನೀಡಿದ್ದಾರೆ. ಎಂಸಿಎಫ್ ಗೊಬ್ಬರ ಕಾರ್ಖಾನೆ ಉಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಎಂಸಿಎಫ್ ಮುಚ್ಚುವ ಸ್ಥಿತಿಯಲ್ಲಿದ್ದಾಗ ಶಾಶ್ವತ ಕ್ರಮಗಳನ್ನು ಕೈಗೊಂಡಿದ್ದರು. ನಮಗೆಲ್ಲ ಗುರುವಿನ ಸ್ಥಾನದಲ್ಲಿದ್ದು ಮಾರ್ಗದರ್ಶನ ನೀಡಿದ್ದರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು ಅನಂತ್ ಕಾಲದಲ್ಲಿ. ಕೇಂದ್ರದಲ್ಲಿ ಆಡ್ವಾಣಿ-ವಾಜಪೇಯಿ ಜೋಡಿಯಂತೆ ರಾಜ್ಯದಲ್ಲಿ ಬಿಎಸ್‌ವೈ-ಅನಂತ್ ಇದ್ದರು ಎಂದು ಸಂಸದ ನಳಿನ್ ಹೇಳಿದರು. 

Related posts

Leave a Reply