Header Ads
Header Ads
Breaking News

ಕೇಂದ್ರ ಸಚಿವ ಹೆಚ್.ಎನ್ ಅನಂತ್‌ಕುಮಾರ್ ವಿಧಿವಶ

ಬೆಂಗಳೂರು: ಕರ್ನಾಟಕದ ಜನಪ್ರಿಯ ರಾಜಕಾರಣಿ, ಕೇಂದ್ರ ಸಚಿವ, ಬಿಜೆಪಿಯ ಪ್ರಮುಖ ನಾಯಕ ಅನಂತ್ ಕುಮಾರ್ (59) ಅವರು ಇಂದು ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರು, ಕಡೆಯ ಹಂತದಲ್ಲಿ ಲಂಡನ್ನಿಗೆ ಹೋಗಿ ಚಿಕಿತ್ಸೆ ಪಡೆದು, ಸಾಕಷ್ಟು ಹೋರಾಟ ನಡೆಸಿದರೂ ಗೆಲ್ಲಲು ಸಾಧ್ಯವಾಗಲೇ ಇಲ್ಲ. ಸೋಮವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅವರು ನಗರದ ಶಂಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಸಂಸದರಾಗಿ, ಕೇಂದ್ರ ಸಚಿವರಾಗಿ, ಕರ್ನಾಟಕ ರಾಜ್ಯದ ಪ್ರಮುಖ ಬಿಜೆಪಿ ನಾಯಕರಲ್ಲೊಬ್ಬರಾಗಿ ಅವರು ಎಲ್ಲರೊಂದಿಗೂ ಆತ್ಮೀಯವಾಗಿಯೇ ಬೆರೆಯುತ್ತಿದ್ದ ಅನಂತ್ ಕುಮಾರ್ ಕುಮಾರ್ ಅಗಲಿಕೆಗೆ ಮೋದಿ ಭಾವುಕ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.

1959 ಜುಲೈ 22 ರಂದು ಎಚ್ ಎನ್ ನಾರಾಯಣ ಶಾಸ್ತ್ರಿ, ಗಿರಿಜಾ ಶಾಸ್ತ್ರಿ ದಂಪತಿಯ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದ ಅನಂತ್ ಕುಮಾರ್, ಕೆ ಎಸ್ ಆರ್ಟ್ಸ್ ಕಾಲೇಜ್ ಹುಬ್ಬಳ್ಳಿಯಲ್ಲಿ ಬಿ ಎ ಪದವಿ ಪಡೆದರು. ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದಿಂದ ಎಲ್ ಎಲ್ ಬಿ ಪದವಿ ಪಡೆದರು. ಚಿಕ್ಕ ವಯಸ್ಸಿನಿಂದÀಲೂ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಇಂದಿರಾ ಗಾಂಧಿ ಸರ್ಕಾರದ ಅವಧಿಯಲ್ಲಿ ಘೋಷಣೆಯಾದ ತುರ್ತುಪರಿಸ್ಥಿತಿ ಸಮಯದಲ್ಲಿ ಜೈಲುವಾಸ ಅನುಭವಿಸಿದ್ದ ಅನಂತ್, ಎಬಿವಿಪಿಯ ರಾಜ್ಯ ಕಾರ್ದರ್ಶಿಯಾಗಿ ನಂತರ 1985 ರಲ್ಲಿ ರಾಷ್ಟ್ರ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ನಂತರ ಬಿಜೆಪಿಗೆ ಸೇರಿದ ಅವರನ್ನು ಭಾರತೀಯ ಯುವ ಮೋರ್ಚಾ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. 1996 ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾದ ಅನಂತ್ ಕುಮಾರ್, 1998ರಲ್ಲಿ ಮೊದಲ ಬಾರಿಗೆ ವೆಬ್‍ಸೈಟ್‍ವೊಂದನ್ನು ಚುನಾವಣೆಯ ಉದ್ದೇಶದಿಂದ ಆರಂಭಿಸಿದರು. ಈ ರೀತಿ ರಾಜಕಾರಣಿಯಾಗಿ ವೆಬ್ ಸೈಟ್ ತಯಾರಿಸಿದವರಲ್ಲಿ ಅನಂತ್ ಕುಮಾರ್ ಮೊದಲಿಗರೆನ್ನಿಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿ ಅನಂತ್ ಕುಮಾರ್ ಸೇವೆ ಸಲ್ಲಿಸಿದರು. ಅತ್ಯಂತ ಕಿರಿ ವಯಸ್ಸಿನ ಕೇಂದ್ರ ಸಚಿವರು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸತತ ಮೂರು ಬಾರಿ ಕೇಂದ್ರ ಸಚಿವರಾಗಿ ಆಯ್ಕೆಯಾದ ಅವರು ಬಿಜೆಪಿ ಪ್ರಮುಖ ನಾಯಕರಲ್ಲೊಬ್ಬರಾದರು. 2003 ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಅವರ ಅವಧಿಯಲ್ಲಿ ವಿಧಾನಸಭೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 2004 ರಲ್ಲಿ ಅತೀ ಹೆಚ್ಚು ಲೋಕಸಭೆ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು. 2004 ರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ದರ್ಶಿಯಾಗಿ ಅವರು ಆಯ್ಕೆಯಾದರು. ಬಿಹಾರ, ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತಿತರ ರಾಜ್ಯಗಳಲ್ಲೂ ಬಿಜೆಪಿಯನ್ನು ಬೆಳೆಸುವಲ್ಲಿ ಅವರ ಕೊಡುಗೆ ಅಪಾರ.

2014 ರ ಮೇ 26 ರಂದು ಅವರನ್ನು ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವರನ್ನಾಗಿ ನೇಮಿಸಲಾಗಿತ್ತು ರಾಜಕಾರಣದ ಹೊರತಾಗಿ ಸಾಮಾಜಿಕ ಸೇವೆಗಳಲ್ಲೂ ಅನಂತ ಕುಮಾರ್ ತಮ್ಮನ್ನು ತಾವು ತೊಡಗಿಸಿಕೊಂಡವರು. ಅದಮ್ಯ ಚೇತನ ಪ್ರತಿಷ್ಠಾನದ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಒದಿಗಿಸುವ ಕೆಲಸವನ್ನೂ ಅತ್ಯಂತ ಶ್ರದ್ಧೆಯಿಂದ ಮಾಡಿದವರು ಅನಂತ ಕುಮಾರ್. ಬೆಂಗಳೂರಿನಲ್ಲಿ ಹಸಿರು ಉಳಿಸುವ ಸಲುವಾಗಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದರು.

Related posts

Leave a Reply