Header Ads
Header Ads
Breaking News

ಕೇಂದ್ರ ಸರಕಾರದಿಂದ ಅಡುಗೆ ಅನಿಲ ಸಬ್ಸಿಡಿ ಕಡಿತ ಯೂತ್ ಲೀಗ್ ಹಾಗೂ ಎ‌ಐವೈ‌ಎಫ್ ನಿಂದ ಪ್ರತಿಭಟನೆ ಕಾಸರಗೋಡಿನ ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ

 

ಕೇಂದ್ರ ಸರಕಾರ ಅಡುಗೆ ಅನಿಲ ಸಬ್ಸಿಡಿ ಕಡಿತ ಗೊಳಿಸಿರುವುದನ್ನು ಪ್ರತಿಭಟಿಸಿ ಯೂತ್ ಲೀಗ್ ಹಾಗೂ ಎ‌ಐವೈ‌ಎಫ್ ವತಿಯಿಂದ ಕಾಸರಗೋಡು ಕೇಂದ್ರ ಅಂಚೆ ಕಚೇರಿ ಮುಂಬಾಗದಲ್ಲಿ ಪ್ರತಿಭಟನಾ ಧರಣಿ ನಡೆಯಿತು. ಮುಸ್ಲಿಂ ಯೂತ್ ಲೀಗ್ ಕಾಸರಗೋಡು ಮಂಡಲ ಸಮಿತಿ ವತಿಯಿಂದ ನಡೆದ ಪ್ರತಿಭಟನಾ ಧರಣಿಯನ್ನು ಯೂತ್ ಲೀಗ್ ಜಿಲ್ಲಾಧ್ಯಕ್ಷ ಅಶ್ರಫ್ ಎಡನೀರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ೨೦೧೮ ಮಾರ್ಚ್ ನಿಂದ ಭಾರತದ ಬದ ಜನರಿಗೆ ಲಭಿಸುತಿದ್ದ ಅಡುಗೆ ಅನಿಲ ಸಬ್ಸಿಡಿ ಇನ್ನು ಕೇವಲ ನೆನಪಾಗಿ ಮಾತ್ರ ಉಳಿಯಲಿದೆ. ಮಾತ್ರವಲ್ಲದೆ ಜೂನ್ ತಿಂಗಳ ಪ್ರಾರಂಭದಿಂದ ಜ್ಯಾರಿಗೆ ಬರುವ ರೀತಿಯಲ್ಲಿ ಎಲ್ಲಾ ತಿಂಗಳಿನಲ್ಲಿಯೂ ಗ್ಯಾಸ್ ಸಿಲಿಂಡರಿಗೆ ೪ ರೂ. ನಂತೆ ಹೆಚ್ಚಳಗೊಳಿಸುವ ತೀರ್ಮಾನವನ್ನು ಕೇಂದ್ರ ಸರಕಾರ ಕೈಗೊಂಡಿರುವುದು ಬಡ ಜನತೆಯ ಮೇಲೆ ನಡೆಸುತ್ತಿರುವ ಘೋರ ಅನ್ಯಾಯವಾಗಿದೆ ಎಂದು ಹೇಳಿದರು. ಪ್ರತಿಭಟನಕಾರರು ಅಂಚೆ ಕಚೇರಿ ಮುಂಬಾಗದ ರಸ್ತೆಯಲ್ಲಿ ಒಲೆ ಉರಿಸಿ ಅಡುಗೆ ಮಾಡುವ ಮೂಲಕ ವಿಶಿಷ್ಟವಾದ ರೀತಿಯಲ್ಲಿ ಪ್ರತಿಭಟಿಸಿದರು. ಈ ಸಂದರ್ಭ ಯೂತ್ ಲೀಗ್ ನೇತರರ ಸಹಿತ ಹಲವಾರು ಮಂದಿ ಕಾರ್ಯಕರ್ತರು ಪಾಲ್ಗೊಂಡರು.


ಬಳಿಕ ಎ ಐ ವೈ ಎಫ್ ಸಂಘಟನೆಯ ಜಿಲ್ಲಾ ಸಮಿತಿ ವತಿಯಿಂದ ನಡೆದ ಪ್ರತಿಭಟನಾ ಧರಣಿಯನ್ನು ಸಂಘಟನೆಯ ಜಿಲ್ಲಾ ಕರ್ಯದರ್ಶಿ ಮುಖೇಸ್ ಬಾಲ ಕೃಷ್ಣನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬಡ ಜನತೆಯ ಮೇಲೇರಿ ಸವಾರಿ ನಡೆಸುತ್ತಿರುವ ಕೇಂದ್ರ ಸರಕಾರದ ಕ್ರಮ ಖಂಡನೀಯ ಇದನ್ನು ಭಾರತೀಯರಾದ ನಾವೆಲ್ಲರೂ ಒಗ್ಗಟ್ಟಾಗಿ ಎದಿರಿಸಬೇಕಾದ ಪರಿಸ್ಥಿತಿ ಬಂದೊದಗಿರುವುದಾಗಿ ಅವರು ಹೇಳಿದರು. ಪ್ರತಿಭಟನಾ ಧರಣಿಯಲ್ಲಿ ನೇತಾರರ ಸಹಿತ ಹಲವಾರು ಮಂದಿ ಕಾರ್ಯಕರ್ತರು ಪಾಲ್ಗೊಂಡರು.

Related posts

Leave a Reply