Header Ads
Header Ads
Breaking News

ಕೇಂದ್ರ ಸರಕಾರದಿಂದ ಕೃಷಿಕ ಮತ್ತು ಯುವಜನತೆಯ ಮೇಲೆ ಹೊಡೆತ ಮೋದಿಯ ನಡೆಯಿಂದ ದೂರ ಸರಿಯುತ್ತಿರುವ ಯುವಜನತೆ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಹೇಳಿಕೆ

“ಮೋದಿಯವರು ಅಧಿಕಾರಕ್ಕೆ ಬರುವಾಗ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ವಿವಿಧ ಕಾನೂನನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರಕಾರ ಕೃಷಿಕ ಮತ್ತು ಯುವ ಜನತೆಗೆ ಹೊಡೆತ ನೀಡಿದ್ದು, ಮೋದಿಯ ನಡೆಯಿಂದ ಅವರೆಲ್ಲ ಬಿಜೆಪಿಯಿಂದ ದೂರ ಸರಿದಿರುವುದು ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟವಾಗಲಿದೆ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ.ವೆಂಕಪ್ಪ ಗೌಡರು ಹೇಳಿದ್ದಾರೆ.ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ರಾಜ್ಯ ಸರಕಾರ ಹಸಿದವರಿಗೆ ಊಟ, ಮೈ ತುಂಬಾ ಬಟ್ಟೆ, ಕೈ ತುಂಬಾ ಉದ್ಯೋಗ ನೀಡಿದೆ. ಯುವ ಸಮೂಹ ಹಾಗೂ ವಿದ್ಯಾರ್ಥಿಗಳಿಗೆ ಮೊಟ್ಟೆಯಿಂದ ಹಿಡಿದು, ಲ್ಯಾಪ್ ಟಾಪ್ ತನಕ ಸೌಲಭ್ಯ ನೀಡಿದೆ. ಮುಂದಿನ ದಿನದಲ್ಲಿ ಎಲ್ಲವರಿಗೆ ಉಚಿತ ಬಸ್‌ಪಾಸ್ ಹಾಗೂ ಉಚಿತ ಶಿಕ್ಷಣ ನೀಡುವ ವ್ಯವಸ್ಥೆ ಮಾಡುತ್ತದೆ. ಆದರೆ ಕೇಂದ್ರ ಸರಕಾರ ಇಂಜಿನಿಯರಿಂಗ್, ಮೆಡಿಕಲ್ ಸೀಟು ಲಭಿಸುತ್ತಿರುವ ಹಳೆಯ ಸಿ.ಇ.ಟಿ. ಪದ್ದತಿಯನ್ನು ತೆಗೆದು ಹಾಕಿ ನೀಟ್ ಪರೀಕ್ಷೆ ಪಾಸಾಗಬೇಕೆಂಬ ಕಾನೂನು ತಂದಿದೆ. ಮೆಡಿಕಲ್, ಎಲ್.ಎಲ್.ಬಿ. ಪಾಸ್ ಮಾಡದ ವಿದ್ಯಾರ್ಥಿಗಳೂ ಇನ್ನೊಂದು ಕಠಿಣ ಪರೀಕ್ಷೆ ಎದುರಿಸುವ ಸನ್ನಿವೇಶವನ್ನು ತಂದಿದೆ. ವಿವಿಧ ಪದವಿ ಪಡೆದವರಿಗೆ ಉದ್ಯೋಗ ಸಿಗದಿದ್ದರೆ ಪಕೋಡ ಮಾರಿ ಎಂಬ ಹೇಳಿಕೆಯನ್ನು ಮೋದಿಯವರು ಹೇಳುವಂತಾಗಿದೆ“ ಎಂದು ಅವರು ಹೇಳಿದರು.“ರಾಜ್ಯದ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನೀಡುವುದರೊಂದಿಗೆ ರೈತರಿಗೆ ಅವಶ್ಯವಾಗಿರುವ ಹಲವು ಯೋಜನೆಯನ್ನು ಜಾರಿಗೆ ತಂದಿದೆ. ಶೆಟ್ಟರ್ ಸರಕಾರ ರೈತರ ಸಾಲ ಮನ್ನಾದ ಘೋಷಣೆ ಮಾಡಿತ್ತು. ಆದರೆ ಅದನ್ನು ಮಾಡಿದ್ದು ಮಾತ್ರ ಕಾಂಗ್ರೆಸ್ ಸರಕಾರ. 3 ಲಕ್ಷದಿಂದ 10 ಲಕ್ಷದ ವರೆಗೆ 3 ಶೇ. ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ರೈತ ಆತ್ಮಹತ್ಯೆ ಮಾಡಿಕೊಂಡರೆ ಮೃತನ ಕುಟುಂಬಕ್ಕೆ 5 ಲಕ್ಷ ಪರಿಹಾರ, ಪತ್ನಿಗೆ ರೂ.2 ಸಾವಿರ ವಿಧವಾ ವೇತನ, ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ವಿಮೆ ನೀಡುವ ಸೌಲಭ್ಯವಿದೆ. ಅಲ್ಲದೆ ಇದೀಗ ರೂ.50 ಸಾವಿರದವರೆಗಿನ ಪ್ರತಿ ರೈತರ ಸಾಲವನ್ನು ಮಾಡಲಾಗಿದೆ. ಕೇಂದ್ರದಲ್ಲಿಯೂ ನಮ್ಮ ಸರಕಾರ ಇರುವಾಗ ಇದೇ ರೀತಿಯ ಹಲವು ಜನಪರ ಕಾರ್ಯಕ್ರಮ ತರಲಾಗಿತ್ತು ಎಂದ್ಯುವರು ಹೇಳಿದರು. ನೋಟ್ ಬ್ಯಾನ್ ಮತ್ತು ಜಿ.ಎಸ್.ಟಿ.ಯಿಂದ 10 ವರ್ಷ ಹಿಂದಕ್ಕೆ ಹೋದಂತಾಗಿದೆ. ಯಾರಲ್ಲು ದುಡ್ಡೇ ಇಲ್ಲದ ಪರಿಸ್ಥಿತಿಯನ್ನು ಕೇಂದ್ರ ಸರಕಾರ ನಿರ್ಮಿಸಿದೆ. ಬಿಜೆಪಿಯನ್ನು ಬೆಂಬಲಿಸಿದ ಜನರು ಮೋದಿಯವರು ಯಾಕೆ ಹೋಗಾದರು? ಈ ದೇಶದಲ್ಲಿ ಯಾರೂ ಸಂಗ್ರಹಿಸದಷ್ಟು ತೆರಿಗೆ ಸಂಗ್ರಹಿಸಿಯೂ ಯಾಕೆ ಹೀಗೆ ಮಾಡಿದರು ಮೋದಿ ಎಂದು ಪ್ರಶ್ನಿಸುತ್ತಿದ್ದಾರೆ‘’ ಎಂದು ವೆಂಕಪ್ಪ ಗೌಡರು ಹೇಳಿದರು. ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.22ಕೋಟಿ ಅನುದಾನ ಬರುತ್ತದೆ. ಇದನ್ನು ಹೊರತು ಪಡಿಸಿ ವಿವಿಧ ಇಲಾಖೆಗಳು ನೀಡುವ 100 ರಿಂದ 150 ಕೋಟಿ ಅನುದಾನ ಸಿಗುತ್ತದೆ. ಇದು ಏನೂ ಫಾಲೋ ಅಪ್ ಮಾಡದೆಯೂ ಸಿಗುವ ಅನುದಾನ. ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರಯತ್ನ ಪಟ್ಟು 1000 ಕ್ಕೂ ಹೆಚ್ಚು ಕೋಟಿ ಅನುದಾನ ತಂದಿದ್ದಾರೆ. , ಪುತ್ತೂರಿನ ಶಾಸಕಿ ಶಕುಂತಳಾ ಶೆಟ್ಟಿಯವರು 1 ಸಾವಿರದಿಂದ 2 ಸಾವಿರ ಕೋಟಿ ರೂ. ವಿಶೇಷ ಅನುದಾನ ತರಿಸಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೆ ಸುಳ್ಯ ಶಾಸಕ ಅಂಗಾರರಿಗೆ ಇದು ಯಾಕೆ ಆಗಿಲ್ಲ. ಅವರಿಗೆ ಕ್ಷೇತ್ರದ ಮೇಲೆ ಆಸಕ್ತಿಯೇ ಇಲ್ಲದಂತಾಗಿದೆ“ ಎಂದು ವೆಂಕಪ್ಪ ಗೌಡರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಪಿ.ಎಸ್.ಗಂಗಾಧರ್, ಸುರೇಶ್ ಅಮೈ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೊ ಇದ್ದರು.
ವರದಿ: ಪದ್ಮನಾಭ ಸುಳ್ಯ