Header Ads
Header Ads
Breaking News

ಕೇಂದ್ರ ಸರಕಾರದ ನೀತಿಗೆ ವಿರೋಧ : ಕೇಬಲ್ ಆಪರೇಟರ್ಸ್‌ಗಳ ಸಂಘದಿಂದ ಪ್ರತಿಭಟನೆ

ಕೇಂದ್ರ ಸರಕಾರ ಕೇಬಲ್ ಆಪರೇಟರ್ಸ್‌ಗಳ ಮೇಲೆ ಗದಾ ಪ್ರಹಾರ ನಡೆಸಿದೆ. ಟ್ರಾಯ್‌ನ ಹೊಸ ಕಾನೂನು ಜಾರಿಗೆ ಆದ್ರೆ ಕೇಬಲ್ ಆಪರೇಟರ್‌ಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಲಿದ್ದು, ಕೇಂದ್ರ ಸರಕಾರದ ನೂತನ ನೀತಿಯ ವಿರುದ್ದ ಉಡುಪಿ ರಜತಾದ್ರಿಯ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈಗಾಗಲೇ ಉಡುಪಿ ಜಿಲ್ಲೆಯಾದ್ಯಂತ ಕೇಬಲ್‌ನ ಮೂಲಕ ಗ್ರಾಹಕರಿಗೆ ೨೫೦ರಿಂದ ೩೦೦ ರೂ ಒಳಗೆ ೨೦೦ಕ್ಕೂ ಹೆಚ್ಚು ಚಾನೆಲ್‌ಗಳು ಲಭ್ಯವಾಗುತ್ತಿದೆ. ಆದ್ರೆ ಇದೀಗ ಕೇಂದ್ರ ಸರಕಾರದ ಅಧೀನದ ಟೆಲಿಕಾಂ ರೆಗ್ಯುಲೆಟರಿ ಅಥೋರಿಟಿ ಆಫ್ ಇಂಡಿಯಾ ನೂತನ ನೀತಿಯನ್ನು ಜಾರಿಗೆಗೊಳಿಸಲಿದ್ದು ೧೩೦ರಿಂದ ೧೫೦ ರೂ ತನಕ ಪ್ರೀ ಚಾನೆಲ್ ಗೋಸ್ಕರ ಗ್ರಾಹಕರು ದುಡ್ಡು ಕಟ್ಟಬೇಕಾಗಿದೆ. ಮಾತ್ರವಲ್ಲದೇ ಮನೋರಂಜನಾ ಹಾಗೂ ಕ್ರೀಡೆಗೆ ಸಂಬಂಧಿತ ಚಾನೆಲ್‌ಗಳಿಗೆ ಪ್ರತ್ಯೇಕ ದರವನ್ನು ನಿಗದಿ ಪಡಿಸಲಾಗಿದ್ದು ಪ್ರತೀ ಚಾನೆಲ್ ಹೊಂದಬೇಕಾದರೆ ೫೦೦ರಿಂದ ೧೦೦೦ ಸಾವಿರ ತನಕ ಗ್ರಾಹಕರು ದುಡ್ಡು ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕೇಬಲ್ ಆಪರೇಟರ್‌ಗಳು ಯಾವುದೇ ಫ್ರೀ ಚಾನೆಲ್‌ಗಳಿಗೆ ಗ್ರಾಹಕರ ಮೇಲೆ ಹೊರೆ ಹಾಕಿಲ್ಲ. ಆದ್ರೆ ಹೊಸ ನೀತಿಯಿಂದಾಗಿ ಗ್ರಾಹಕರು ಹೆಚ್ಚುವರಿ ಹಣವನ್ನು ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನೀತಿಯನ್ನ ವಿರೋಧಿಸಿ ಕೇಬಲ್ ಆಪರೇಟರ್ಸ್‌ಗಳ ಸಂಘದಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Related posts

Leave a Reply