Header Ads
Header Ads
Header Ads
Breaking News

ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ; ಕೃಷ್ಣಾಪುರ ಪ್ಯಾರಡೇಸ್ ಮೈದಾನದಲ್ಲಿ ನಡೆದ ಶಾಂತಿಯುತ ಪ್ರತಿಭಟನೆ

ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಂವಿಧಾನ ಉಳಿಸಿ ದೇಶ ರಕ್ಷಿಸಿ’ ಬೃಹತ್ ಪ್ರತಿಭಟನಾ ಸಮಾವೇಶವು ನಗರದ ಹೊರವಲಯದ ಕೃಷ್ಣಾಪುರ ಪ್ಯಾರಡೇಸ್ ಮೈದಾನದಲ್ಲಿ ನಡೆಯಿತು.

ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಮೊಯ್ದಿನ್ ಬಾವ, ಸರ್ವ ಧರ್ಮ ಮನೋಭಾವದ ಸಂದೇಶವನ್ನು ನೀಡಿದ ಸಂವಿಧಾನದ ಆಶಯಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತಿರುಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾಮಾಜಿಕ ಹೋರಾಟಗಾರ, ಲೇಖಕ ಬಿ.ಆರ್. ಭಾಸ್ಕರ್ ಮಾತನಾಡಿ, ಎನ್‍ಆರ್‍ಸಿ ಯಿಂದ ಮುಸ್ಲಿಮರಿಗೆ ತೊಂದರೆ ಆಗುವುದಕ್ಕಿಂತ ಮುಸ್ಲಿಮೇತರರಿಗೇ ಹೆಚ್ಚು ತೊಂದರೆ ಆಗಲಿದೆ. ಅಶ್ವತ್ಥ್ ನಾರಾಯಣ ಅವರನ್ನು `ಅಸ್ವಸ್ಥ ನಾರಾಯಣ’ ಎಂದು ಕರೆಯುತ್ತೇನೆ ಎಂದರು. ಹಿರಿಯ ಪತ್ರಕರ್ತ ಶಶಿಧರ್ ಭಟ್ ಮಾತನಾಡಿ, ರಕ್ತಾಪಾತಿಗಳು, ವಿಭಜಕರು, ಕೋಮುವಾದ ನಡೆಸುವವರು ಬಲಿಷ್ಠರಾಗುತ್ತಿದ್ದಾರೆ. ಈ ದೇಶ ಉಳಿಯಬೇಕಾದರೆ ಹಿಂದೂ ಮತ್ತು ಮುಸ್ಲಿಂ ರ ಸೌಹರ್ದತೆಯಲ್ಲಿ ಇರಬೇಕಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನಾ ಸಮಾವೇಶದ ಅಧ್ಯಕ್ಷತೆಯನ್ನು ಅಶ್ರಫ್ ಬದ್ರಿಯಾ ವಹಿಸಿದ್ದರು.

ಸಭೆಯಲ್ಲಿ ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಬಿ.ಎಂ. ಮಮ್ತಾಝ್ ಅಲಿ, ಅಬೂಬಕರ್ ಕುಳಾಯಿ, `ಸನ್ಮಾರ್ಗ’ ವಾರಪತ್ರಿಕೆ ಪ್ರಧಾನ ಸಂಪಾದಕ ಎ.ಕೆ.ಕುಕ್ಕಿಲ, ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿ ಧರ್ಮಗುರು ಉಮರುಲ್ ಫಾರೂಕ್ ಸಖಾಫಿ, ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ ಧರ್ಮಗುರು ಅಝೀಝ್ ದಾರಿಮಿ, ಮಂಗಳೂರು ಎಸ್‍ಕೆಎಸ್‍ಎಂ ದಾವಾ ಸೆಂಟರ್ ಅಧ್ಯಕ್ಷ ಎಂ.ಜಿ. ಮುಹಮ್ಮದ್, ಪಿಎಫ್‍ಐನ ಎ.ಕೆ. ಅಶ್ರಫ್ ಜೋಕಟ್ಟೆ, ದಲಿತ ಚಳವಳಿಗಾರ ಅಶೋಕ ಕೊಂಚಾಡಿ, ಮನಪಾ ಮಾಜಿ ಮೇಯರ್ ಕೆ.ಅಶ್ರಫ್, ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *