Header Ads
Header Ads
Header Ads
Breaking News

ಕೇಂದ್ರ ಸರಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ಅಂಚೆ ಕಚೇರಿ ಎದುರು ಉಡುಪಿ ಯುವ ಕಾಂಗ್ರೆಸ್‌ನಿಂದ ಪ್ರೊಟೆಸ್ಟ್

 

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಸರಕಾರ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳಿ ದೇಶದ ಯುವಕರಿಗೆ ಮೋಸ ಮಾಡಿದೆ ಎಂದು ಆರೋಪಿಸಿ ಉಡುಪಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಕೇಂದ್ರದದ ವಿರುದ್ದ ಪ್ರತಿಭಟನೆ ನಡೆಸಿತು.ಉಡುಪಿಯ ಪ್ರದಾನ ಅಂಚೆ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಉದ್ಯೋಗ ಸೃಷ್ಟಿಸದೇ ದೇಶದ ಯುವಕರನ್ನು ವಂಚಿಸುತ್ತಿರುವ ಕೇಂದ್ರದ ವಿರುದ್ದ ಘೋಷಣೆ ಕೂಗಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಉಮೇಶ್ ಬೋರೆಗೌಡ ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ಕನಿಷ್ಟ ೧೦ ಶೇಕಡಾ ಉದ್ಯೋಗ ಸೃಷ್ಟಿಸದೇ ದೇಶದ ಯುವಕರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ವಿಗ್ನೇಶ್ ಕಿಣಿ, ನಾಗೇಶ್ ಉದ್ಯಾವರ, ಕೀರ್ತಿ ಶೆಟ್ಟಿ, ಮುಂತದಾವರು ಉಪಸ್ಥಿತರಿದ್ದರು.
ವರದಿ:ಪಲ್ಲವಿ ಸಂತೋಷ್

Related posts

Leave a Reply