Header Ads
Breaking News

ಕೇಂದ್ರ ಸರಕಾರ ವಿರುದ್ಧ ಪ್ರತಿಭಟನೆ & ಸಹಿ ಮರ ಅಭಿಯಾನ : ಮಂಜೇಶ್ವರದ ಉಪ್ಪಳ ಜಂಕ್ಷನ್‍ನಲ್ಲಿ ನಡೆದ ಪ್ರೊಟೆಸ್ಟ್

ರೈತ ಹೋರಾಟದ ನೂರು ದಿನ ಬೆಂಬಲ ಸೂಚಿಸಿ ಕೇಂದ್ರ ಸರಕಾರ ವಿರುದ್ಧ ಪ್ರತಿಭಟನೆ ಮತ್ತು ಸಹಿ ಮರ ಅಭಿಯಾನ ಉಪ್ಪಳ ಜಂಕ್ಷನ್‍ನಲ್ಲಿ ಜರುಗಿತು.

ಎಐವೈಎಫ್ ಮಂಜೇಶ್ವರ ಮಂಡಲಾಧ್ಯಕ್ಷ ದಯಾಕರ್ ಮಾಡ ರವರ ಅಧ್ಯಕ್ಷತೆಯಲ್ಲಿ ಜರುಗಿದ ಪ್ರತಿಭಟನಾ ಸಭೆಯನ್ನು ಎಐವೈಎಫ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಮುಕೇಶ್ ಬಾಲಕೃಷ್ಣನ್ ಉದ್ಘಾಟಿಸಿದರು.

ಈ ವೇಳೆ ಸಿಪಿಐ ನೇತಾರ ಹರೀಶ್ ಶೆಟ್ಟಿ ಕೋಡಿಬೈಲ್, ಮುಸ್ತಫಾ ಕಡಂಬಾರ್, ಎಐವೈಎಫ್ ನೇತಾರರಾದ ಎಂ.ಶ್ರೀಜಿತ್, ಹರೀಶ್ ಕೆ.ಆರ್, ಮನು ಪುತ್ತಿಗೆ, ಶಿವರಾಜ್ ಕೆದುಂಬಾಡಿ, ಎಐವೈಎಫ್ ಮಂಜೇಶ್ವರ ಮಂಡಲ ಕಾರ್ಯದರ್ಶಿ ಅಜಿತ್.ಎಂ.ಸಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು.

Related posts

Leave a Reply

Your email address will not be published. Required fields are marked *