Header Ads
Header Ads
Header Ads
Breaking News

ಕೇಂದ್ರ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಪುತ್ತೂರಿನಲ್ಲಿ ಜೆಡಿ‌ಎಸ್ ಗಂಭೀರ ಆರೋಪ

 

ಕೇಂದ್ರದಲ್ಲಿ ಬಿಜೆಪಿ ಸರಕಾರ ಜಾರಿಗೆ ತಂದ ಯೋಜನೆಗಳು ದೇಶವನ್ನು ಸಮಸ್ಯೆಯತ್ತ ತಳ್ಳಿದ್ದು, ನಿರಂತರ ವೈಫಲ್ಯಗಳ ಸರಮಾಲೆ ಎದ್ದು ಕಾಣುತ್ತಿದೆ. ಈ ವೈಫಲ್ಯ ಜನರಿಗೆ ಕಾಣಬಾರದು ಎಂಬ ಕಾರಣಕ್ಕೆ ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸಿ ಜನರನ್ನು ಮತೀಯ ಧ್ರುವೀಕರಣ ಮಾಡಿ ಓಟು ಗಳಿಸಿ ಕೊಡುವ ಕೆಲಸಕ್ಕೆ ಸಂಘ ಪರಿವಾರ ಮುಂದಾಗಿದೆ ಎಂದು ಜೆಡಿ‌ಎಸ್ ಆಪಾದಿಸಿದೆ.

ಪಕ್ಷದ ಪುತ್ತೂರು ನಿಕಟಪೂರ್ವ ಅಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.
ಸೆ.೧೫ರಂದು ಪುತ್ತೂರಿನಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ಪ್ರತಿಭಟನಾ ಸಭೆಯಲ್ಲಿ ಆ ಸಂಘಟನೆಯ ಮುಖಂಡ ಜಗದೀಶ್ ಕಾರಂತ್ ಮಾಡಿದ ಭಾಷಣ ಈ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸುವ ತಂತ್ರ. ಶಾಂತಿ ಬಯಸುವ ಜಿಲ್ಲೆಯ ಜನತೆ ಗಲಭೆಯ ನೇತೃತ್ವ ವಹಿಸಲು ಮುಂದಾಗುತ್ತಿಲ್ಲ. ಈ ಕಾರಣಕ್ಕಾಗಿ ಹೊರಗಿನಿಂದ ಭಾಷಣಕಾರರನ್ನು ಕರೆಸಿಕೊಂಡು ಇಲ್ಲಿ ಕೋಮು ಪ್ರಚೋದಕ ಭಾಷಣ ಮಾಡಿಸಿ ಸಮಾಜದ ನೆಮ್ಮದಿ ಹಾಳು ಮಾಡಿ ಅದರ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ನಡೆದಿದೆ ಎಂದವರು ನುಡಿದರು.

ಜೆಡಿ‌ಎಸ್ ಮುಖಂಡರಾದ ಅಶ್ರಫ್ ಕೊಟ್ಯಾಡಿ, ವಿಕ್ಟರ್ ಗೋನ್ಸಾಲಿಸ್, ಪಿ.ಎಂ.ಇಬ್ರಾಹಿಂ ಪರ್ಪುಂಜ ಉಪಸ್ಥಿತರಿದ್ದರು.
ವರದಿ: ಅನೀಶ್ ಪುತ್ತೂರು

Related posts

Leave a Reply