Header Ads
Header Ads
Breaking News

ಕೇರಳಕ್ಕೆ ಅಕ್ರಮ ಜಾನುವಾರು ಸಾಗಾಟ

ಅಕ್ರಮವಾಗಿ ಕೇರಳಕ್ಕೆ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ರಸ್ತೆಗೆ ಪಲ್ಟಿ ಹೊಡೆದು ಎರಡು ದನಗಳು ಸ್ಥಳದಲ್ಲೇ ಮೃತಪಟ್ಟು, ನಾಲ್ಕು ದನ ಹಾಗೂ ಪಿಕಪ್ ವಾಹನವನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದ ಘಟನೆ ವಿಟ್ಲದ ಪೆರುವಾಯಿ ಗ್ರಾಮದಲ್ಲಿ ನಡೆದಿದೆ.

ಪೆರುವಾಯಿ ರಸ್ತೆ ಮೂಲಕ ಕೇರಳಕ್ಕೆ ಪಿಕಪ್ ವಾಹನದಲ್ಲಿ ಏಳು ದನಗಳನ್ನು ಕೊಂಡೊಯ್ಯಲಾಗುತ್ತಿತ್ತು. ಪೆರುವಾಯಿಯ ಕೆದುವಾರು ಎಂಬಲ್ಲಿ ಚಾಲಕನ ನಿಯಂತ್ರಣ ಕಳೆದು ಪಿಕಪ್ ರಸ್ತೆಗೆ ಉರುಳಿದೆ. ಈ ಬಗ್ಗೆ ಸ್ಥಳೀಯರು ವಿಟ್ಲ ಪೊಲೀಸರಿಗೆ ನೀಡುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಒಂದು ಗಂಡು ಹಾಗೂ ಒಂದು ದನ ಸಾವನ್ನಪ್ಪಿದೆ. ಮತ್ತೊಂದು ದನ ಸ್ಥಳದಿಂದ ಓಡಿ ಹೋಗಿದೆ. ಇನ್ನುಳಿದ 4 ಜೀವಂತ ದನಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ಗೋ ಶಾಲೆಗೆ ಹಸ್ತಾಂತರ ಮಾಡಿ, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply