Header Ads
Breaking News

ಕೇರಳದಲ್ಲಿ ಇಂದು ಶಾಲಾ ಪ್ರವೇಶೋತ್ಸವ ! ಕನ್ನಡ ಮಾಧ್ಯಮ ಶಾಲೆಗಳ ಮೇಲೆ ಮಲಯಾಳಂ ಭಾಷಾ ಗುಮ್ಮ!

ಕೇರಳ ರಾಜ್ಯದ ಉದ್ಯಾವರ ಗೇಟ್‌ನಲ್ಲಿ ವಿದ್ಯಾರ್ಥಿಗಳು ಹೊಸ ಪಠ್ಯ ಪುಸ್ತಕಗಳೊಂದಿಗೆ ಶಾಲೆಗಳಿಗೆ ತೆರಳಲಿದ್ದು, ಶಾಲಾ ಪ್ರವೇಶೋತ್ಸವದಲ್ಲಿ ಭಾಗವಹಿಸಿದ್ದಾರೆ.ಮಂಜೇಶ್ವರ ಪಂಚಾಯತು ಮಟ್ಟದ2018-19ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉದ್ಯಾವರ ಗೇಟ್ ನಲ್ಲಿ ನಡೆಯಿತು. ಶಾಲಾ ಮುಖ್ಯೋಪಧ್ಯಾಯಿನಿ ಐಡ ಸೋಫಿಯ ಡಿ ಸೋಜ ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರವೇಶೋತ್ಸವವನ್ನು ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ಉದ್ಘಾಟಿಸಿದರು.

 

ಈ ಸಂದರ್ಭ ಅಬ್ದುಲ್ ರಹ್ಮಾನ್ ಹಾಜಿ ಕೆ ಎಂ ಕೆ, ವಾರ್ಡ್ ಸದಸ್ಯೆ ಪ್ರಮೀಳಾ, ಸಮಾಜ ಸೇವಕ ಉದ್ಯಮಿ ನವೀನ್ ಮೊಂತೇರೋ. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್, ಅತ್ತಾವುಲ್ಲ ತಂಘಲ್, ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.ವಿದ್ಯಾರ್ಥಿಗಳು ಹಾಗೂ ಜನಪ್ರತಿನಿಧಿಗಳು ಶಿಕ್ಷಕರು ಮಂಜೇಶ್ವರ ರೈಲ್ವೇ ರಸ್ತೆ ತನಕ ಮೆರವಣಿಗೆ ನಡೆಸಿದರು. ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ ಮಂಗಲ್ಪಾಡಿ ಶಾಲೆಯಲ್ಲಿ ನಡೆದಿದೆ.ಜಿಲ್ಲೆಯ ಹೆಚ್ಚಿನ ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಸ್ಮಾರ್ಟ್ ಕ್ಲಾಸ್‌ರೂಮ್‌ಗಳನ್ನು ಸಿದ್ಧಪಡಿಸಲಾಗಿದ್ದು, ವಿದ್ಯಾರ್ಥಿನಿಯರಿಗೆ ಶೀ-ಟಾಯ್ಲೆಟ್ ವ್ಯವಸ್ಥೆ ಕಲ್ಪಿಸಲಾಗಿದೆ.ಸರಕಾರಿ ಶಾಲೆಗಳಲ್ಲಿ ಪ್ರತಿಬಾರಿಗಿಂತ10 ಶೇ. ಹೆಚ್ಚಿನ ನೋಂದಣಿಯಾಗುವ ನಿರೀಕ್ಷೆಯಿದೆ. ಜಿಲ್ಲೆಯ ಮಲಯಾಳಂ ಮತ್ತುಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು ೩೬೮ ಮಂದಿ ಶಿಕ್ಷಕರ ಕೊರತೆಯಿದೆ. ಹಿರಿಯ ಪ್ರಾಥಮಿಕ ಶಾಲೆಗಳ ಕನ್ನಡ ಮತ್ತು ಮಲಯಾಳಂ ಮಾಧ್ಯಮದಲ್ಲಿ ಪಾಠಮಾಡುವ 260 ಮಂದಿ ಶಿಕ್ಷಕರ ಕೊರತೆಯಿದೆ. ಜಿಲ್ಲೆಯ ಹಲವು ಪ್ರೌಢಶಾಲೆಗಳಲ್ಲಿ149ಮಂದಿ ಶಿಕ್ಷಕರ ಕೊರೆತೆಯಿದೆ ಎಂದು ತಿಳಿಸಿರುವ ಶಿಕ್ಷಣ ಇಲಾಖೆ, ಖಾಲಿ ಬಿದ್ದಿರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವಂತೆ ಲೋಕಸೇವಾ ಆಯೋಗವನ್ನು ಕೇಳಿಕೊಂಡಿದೆ.ಸರಕಾರಿ ಮತ್ತು ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಹೇರಿಕೆ ವಿರುದ್ದ ಪ್ರತಿಭಟನೆಗಳು ಮುಂದುವರಿದಿದೆ.

Related posts

Leave a Reply