Header Ads
Header Ads
Breaking News

ಕೇರಳದಲ್ಲಿ ನಡೆದ ಹರತಾಳದಿಂದ ಭಾರೀ ನಷ್ಟ,ನಷ್ಟ ಪರಿಹಾರ ನೀಡಬೇಕು : ಅಹಮ್ಮದ್ ಶೆರೀಫ್ ಹೇಳಿಕೆ

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ಖಂಡಿಸಿ ಕೇರಳ ರಾಜ್ಯದಲ್ಲಿ ಹರತಾಳ ಕರೆ ನೀಡಿದ್ದಾರೆ. ಇದರ ಪರಿಣಾಮ ನೇರವಾಗಿ ವ್ಯಾಪಾರಿಗಳ ಮೇಲೆ ಬೀರಿದೆ. ವ್ಯಾಪಾರ ಕೇಂದ್ರಗಳ ಮೇಲೆ ದಾಳಿ ನಡೆಸಿ ಅಪಾರ ನಷ್ಟವನ್ನು ಅನುಭವಿಸಿದ ವ್ಯಾಪಾರಿಗಳಿಗೆ ಆರೋಪಿಗಳಿಂದಲೇ ನಷ್ಟ ಪರಿಹಾರವನ್ನು ಪಡೆದು ನೀಡಬೇಕಾಗಿ ವ್ಯಾಪಾರಿ ವ್ಯವಸಾಯ ಏಕೋಪನಾ ಸಮಿತಿಯ ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶೆರೀಫ್ ಹೇಳಿದ್ದಾರೆ.

ಈ ಬಗ್ಗೆ ಮಂಜೇಶ್ವರದಲ್ಲಿ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹರತಾಳದಲ್ಲಿ ಉಂಟಾದ ಅಕ್ರಮ ಘಟನೆಗಳಲ್ಲಾಗಿ ಬಂದ್ಯೋಡಿನಲ್ಲಿ ಸುಮಾರು ೩೦ರ ತನಕ ವ್ಯಾಪಾರ ಕೇಂದ್ರಗಳು ಹಾಗೂ ಕಾಸರಗೋಡು ಸುಮಾರು 5ವ್ಯಾಪಾರ ಕೇಂದ್ರಗಳಿಗೂ ನಡೆದ ಆಕ್ರಮಣದಲ್ಲಿ ಸುಮಾರು ೩೦ಲಕ್ಷ ರೂ. ತನಕ ನಷ್ಟ ಉಂಟಾಗಿದೆ.

ಪೊಲೀಸರು ವಾಗ್ದಾನ ನೀಡಿದ ಸುರಕ್ಷೆಯಲ್ಲಿ ಭಾರೀ ಹಿನ್ನಡೆ ಉಂಟಾಗಿದೆ ಜೊತೆಯಾಗಿ ಕಿಡಿಗೇಡಿಗಳ ಅಟ್ಟಹಾಸದಿಂದ ವ್ಯಾಪಾರಿಗಳಿಗೆ ಭಾರೀ ನಷ್ಟ ಸಂಭವಿಸಿದೆ. ಇನ್ನು ಮುಂದಕ್ಕೂ ಯಾರೇ ನಡೆಸುವ ಹರತಾಳಕ್ಕೂ ಸಹಕರಿಸಬಾರದಾಗಿ ವ್ಯಾಪಾರಿ ಸಂಘಟನೆಯ ನಿರ್ಧರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೆ.ಜೆ ಶಾಜಿ, ಕೆ ಎ ಮೊಹಮ್ಮದ್ ರಫೀಕ್, ಕೆ ಮಣಿಕಂಠನ್, ಜಬ್ಬಾರ್ ಉಪ್ಪಳ, ಕಮಲಾಕ್ಷ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply