Header Ads
Breaking News

ಕೇರಳದಲ್ಲಿ ಮತ್ತೆ ಕರಾಳತೆ:42 ಮಂದಿಗೆ ಕೊರೊನಾ ಸೋಂಕು ದೃಢ

ಕಾಸರಗೋಡು: ಕೇರಳದಲ್ಲಿ ಶುಕ್ರವಾರ ಒಂದೇ ದಿನ 42 ಕೊರೊನಾ ಪ್ರಕರಣಗಳು ದೃಢಗೊಂಡಿದೆ. ಕೇರಳಕ್ಕೆ ಇದು ಕೊರೊನಾ ಇತಿಹಾಸದ ಕರಾಳ ಶುಕ್ರವಾರವಾಗಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಕೊರೊನಾ ಸೋಂಕು ದೃಢಗೊಂಡ ದಿನವಾಗಿದೆ. ಇದೇ ವೇಳೆ ರಾಜ್ಯದಲ್ಲಿ ಇಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 7 ಮಂದಿಗೆ ಸೋಂಕು ದೃಢಗೊಂಡಿದೆ. ಇದರೊಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 26 ಕ್ಕೇರಿತು. ಕಣ್ಣೂರು ಜಿಲ್ಲೆ-12, ಕಾಸರಗೋಡು-7, ಕಲ್ಲಿಕೋಟೆ-5, ಪಾಲ್ಘಾಟ್-5, ತೃಶ್ಶೂರು-4, ಮಲಪ್ಪುರಂ-4, ಕೋಟ್ಟಯಂ-2, ಕೊಲ್ಲಂ-1, ಪತ್ತನಂತಿಟ್ಟ-1, ವಯನಾಡು-1 ಎಂಬಂತೆ ರೋಗ ಬಾಧಿಸಿದೆ.ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 7 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಪುತ್ತಿಗೆ ನಿವಾಸಿಯಾಗಿರುವ 57 ವರ್ಷ ಪ್ರಾಯದ ವ್ಯಕ್ತಿ, ಮುಳಿಯಾರು ನಿವಾಸಿ 42 ವರ್ಷದ ವ್ಯಕ್ತಿ, ಕುಂಬಳೆ ನಿವಾಸಿಗಳಾದ 36, 38, 42, 56 ವರ್ಷ ಪ್ರಾಯದ ವ್ಯಕ್ತಿಗಳಿಗೆ ಸೋಂಕು ಖಚಿತಗೊಂಡಿದೆ.

Related posts

Leave a Reply

Your email address will not be published. Required fields are marked *