Header Ads
Header Ads
Breaking News

ಕೇರಳದ ಸಿ.ಎಂ. ಅಬ್ದುಲ್ ಮೌಲವಿ ಉಸ್ತಾದ್ ನಿಗೂಢ ಸಾವಿನ ಪ್ರಕರಣ: ಫೆ.28ರಂದು ಕಲ್ಲಿಕೋಟೆಯಲ್ಲಿ ಪ್ರತಿಭಟನಾ ಸಮಾವೇಶ

ಮಂಜೇಶ್ವರ : ಸಮಸ್ತ ಕೇರಳ ಜಂಈಯ್ಯತ್ತುಲ್ ಉಲಮಾ ಉಪಾಧ್ಯಕ್ಷರಾಗಿದ್ದ ಸಿ.ಎಂ ಅಬ್ದುಲ್ಲ ಮೌಲವಿ ಉಸ್ತಾದ್ ಸಾವಿನಲ್ಲಿರುವ ನಿಗೂಢತೆಯನ್ನು ಹೊರ ತರಲು ಉನ್ನತ ಮಟ್ಟದ ತನಿಖೆ ಆಗ್ರಹಿಸಿ ಫೆಬ್ರವರಿ 28ರಂದು ಕಲ್ಲಿಕೋಟೆಯಲ್ಲಿ ಪ್ರತಿಭಟನಾ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಮಂಜೇಶ್ವರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕೇರಳ ಜಂಈಯ್ಯತುಲ್ ಖುತಬಾ ಮಂಜೇಶ್ವರ ಮಂಡಲ ಸಮಿತಿಯವರು. ಸಿ.ಎಂ ಅಬ್ದುಲ್ಲ ಮೌಲವಿ ಉಸ್ತಾದ್‌ರವರು ನಿಗೂಢವಾಗಿ ಸಾವನ್ನಪ್ಪಿದ್ದು, ಈ ವರೆಗೆ ಪ್ರಕರಣವನ್ನು ಬೇಧಿಸಿಲ್ಲ. ಈ ಹಿನ್ನೆಲೆಯಲ್ಲಿ
ಕಲ್ಲಿಕೋಟೆಯಲ್ಲಿ ಮುದಲಕ್ಕುಳಂ ಮೈದಾನದಲ್ಲಿ ಸಮಸ್ತ ಕೇರಳ ಜಂಈಯ್ಯತ್ತುಲ್ ಉಲಮಾ ಆಯೋಜಿಸಿರುವ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದೇವೆ. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಹಸೈನಾರ್ ಫೈಝಿ, ಅಬ್ದುಲ್ ಹಮೀದ್ ಮದನಿ ಉಪ್ಪಳ, ಅಬ್ದುನ್ನಾಸಿರ್ ಯಮಾನಿ, ಅಬ್ದುಲ್ ರಝಾಕ್ ಮುಸ್ಲಿಯಾರ್ ಉಪ್ಪಳ, ಆದಂ ಫೈಝಿ ಗಾಂಧೀ ನಗರ , ಅಬ್ದುಲ್ ನಾಸರ್ ಫೈಝಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *