Header Ads
Breaking News

ಕೇರಳ ತುಳು ಅಕಾಡೆಮಿಯ ತುಳು ಭವನ ನಿರ್ಮಾಣ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಚಾಲನೆ

ಮಂಜೇಶ್ವರ: ಬಹುನಿರೀಕ್ಷಿತ ಕೇರಳ ತುಳು ಅಕಾಡೆಮಿಯ ತುಳು ಭವನ ನಿರ್ಮಾಣ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಅಧಿಕೃತ ಚಾಲನೆ ದೊರಕುವುದರೊಂದಿಗೆ ತುಳುವ ಪ್ರೇಮಿಗಳಲ್ಲಿ ಹರ್ಷ ವ್ಯಕ್ತಗೊಂಡಿದೆ. ರಾಜ್ಯ ಸರಕಾರದ ಸಾವಿರ ದಿನಗಳ ವಿವಿಧ ಯೋಜನೆಗಳ ಕಾರ್ಯಕ್ರಮದಡಿ ತುಳು  ಭವನ ನಿರ್ಮಾಣಕ್ಕಾಗಿ ಹೊಸ ಆಶಾಕಿರಣದೊಂದಿಗೆ ಕಳೆದ ಫೆ.27 ರಂದು ಶಂಕುಸ್ಥಾಪನೆ ನಿರ್ವಹಿಸಿ ಎಲ್ಲರ ಅಚ್ಚರಿಗೆ ಕಾರಣವಾಯಿತು. ಸರಕಾರದ ಅನುದಾನದಲ್ಲಿ ಇದೀಗ ಮೊದಲ ಹಂತದ ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಾಯಿತು. ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷರಾಗಿರುವ ನಿರ್ಮಿತಿ ಕೇಂದ್ರದ ವತಿಯಿಂದ  ಕಾಮಗಾರಿ ನಡೆಯುತ್ತಿದೆ. ಆರು ತಿಂಗಳೊಳಗೆ ಮೊದಲ ಹಂತದ ಕಾಮಗಾರಿ ಪೂರ್ತಿಗೊಳಿಸಿ ಉದ್ಘಾಟನೆಯಾಗಲಿದೆ ಎಂದು ತುಳು ಅಕಾಡೆಮಿಯ ಅಧ್ಯಕ್ಷ ಉಮೇಶ್ ಎಂ ಸಾಲಿಯಾನ್ ತಿಳಿಸಿದ್ದಾರೆ. 

Related posts

Leave a Reply

Your email address will not be published. Required fields are marked *