Header Ads
Breaking News

ಕೇರಳ ತುಳು ಅಕಾಡೆಮಿ ವತಿಯಿಂದ ಸಿಎಂ ಪಿಣರಾಯಿ ವಿಜಯನ್‌ರಿಗೆ ಮನವಿ: ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ

ತುಳು ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಚೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಅಗತ್ಯದ ಕ್ರಮಗಳಿಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ಕೇರಳ ರಾಜ್ಯ ಸರ್ಕಾರ ಒತ್ತಡ ಹೇರಬೇಕು, ಮತ್ತು ಕಾಸರಗೋಡು ಜಿಲ್ಲೆಯ ತುಳು ಭಾಷಿಯ ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಕೇರಳ ತುಳು ಅಕಾಡೆಮಿ ವತಿಯಿಂದ ಕೇರಳ ಸಿಎಂ ಪಿಣರಾಯಿ ವಿಜಯನ್‌ರಿಗೆ ಮನವಿ ಸಲ್ಲಿಸಲಾಯಿತ್ತು. ಜ.28 ರಂದು ಕಾಸರಗೋಡು ಜಿಲ್ಲೆಗೆ ಸಿಎಂ ಪಿಣರಾಯಿ ವಿಜಯನ್ ಆಗಮಿಸಿದ್ದು, ಈ ಸಂದರ್ಭ ತುಳು ಅಕಾಡೆಮಿ ಸದಸ್ಯರು ಮನವಿಯನ್ನು ಸಲ್ಲಿಸಿದ್ದರು. ತುಳುವಿನಲ್ಲಿ ಬಿಡುಗಡೆಗೊಂಡ “ಬರವುದ ಬಿದೆ” ಪುಸ್ತಕವನ್ನು ಕೂಡ ನೀಡಲಾಯಿತ್ತು. ಈ ಸಂದರ್ಭ ಕೇರಳದ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ್ ಸಾಲಿಯಾನ್ ಕಾಸರಗೋಡು, ಮಂಜೇಶ್ವರ ಶಾಸಕ ನ್ಯಾಯವಾದಿ ಸಿ.ಹೆಚ್. ಕುಂಞಅಬ್ಬು ಮತ್ತಿತ್ತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *