Header Ads
Header Ads
Breaking News

ಕೇರಳ ರಾಜ್ಯ ಸರ್ಕಾರವನ್ನು ವಿಸರ್ಜಿಸಬೇಕೆಂದು ಒತ್ತಾಯ:ಪುತ್ತೂರಿನ ಹಿಂದೂ ಜಾಗರಣ ವೇದಿಕೆಯಿಂದ ಆಗ್ರಹ

800ವರ್ಷಗಳ ಇತಿಹಾಸವಿರುವ ಧಾರ್ಮಿಕ ಕ್ಷೇತ್ರವಾದ ಕೇರಳದ ಶಬರಿಮಲೆಯಲ್ಲಿ ನಡೆದುಕೊಂಡು ಬಂದ ಸಂಪ್ರದಾಯವನ್ನು ಕೇರಳ ರಾಜ್ಯ ಸರಕಾರ ಮುರಿಯುವ ಯತ್ನದಲ್ಲಿದ್ದು, ಕೂಡಲೇ ರಾಜ್ಯ ಸರಕಾರವನ್ನು ವಿಸರ್ಜಿಸಬೇಕೆಂದು ಹಿಂದೂ ಜಾಗರಣ ವೇದಿಕೆ ಒತ್ತಾಯಿಸಿದೆ.
ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ದೇವರ ಬಗ್ಗೆ ಕಿಂಚಿತ್ತೂ ನಂಬಿಕೆಯಿಲ್ಲದ, ಮಹಿಳಾ ಹೋರಾಟಗಾರರನ್ನು ಶಬರಿಮಲೆಗೆ ಪೋಲೀಸ್ ಭದ್ರತೆಯಲ್ಲಿ ತಲುಪಿಸುವ ಪ್ರಯತ್ನದಲ್ಲಿ ಕೇರಳ ಸರಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದ್ದಾರೆ. ಹಿಂದೂ ಸಮಾಜದಲ್ಲಿ ಖುತುಮತಿಗೆ ದೇವಸ್ಥಾನ ಪ್ರವೇಶಿಸುವುದು ನಿಶಿದ್ಧವಾಗಿದ್ದು, ಇದೇ ಸಂಪ್ರದಾಯ ಶಬರಿಮಲೆಯಲ್ಲೂ ಆಚರಿಸಿಕೊಂಡು ಬರಲಾಗುತ್ತಿದೆ. ಶಬರಿಮಲೆಗೆ ಹೋಗುವವರು 48ದಿನಗಳ ಕಾಲ ವೃತ ಮಾಡಬೇಕಿದ್ದು, ಮಹಿಳೆಯರಿಗೆ ವೃತ ಮಾಡುವುದು ಕಷ್ಟಸಾಧ್ಯವಾಗಿರುವುದರಿಂದ 10 ವರ್ಷದ ನಂತರದ ಹಾಗೂ 50 ವರ್ಷದ ಒಳಗಿನ ಮಹಿಳೆಯರಿಗೆ ದೇವಸ್ಥಾನಕ್ಕೆ ಪ್ರವೇಶ ನಿಶಿದ್ಧವಾಗಿದೆ. ಆದರೆ ಈ ಆಚಾರಗಳನ್ನು ತುಳಿದು , ಕೇರಳ ಸರಕಾರ ಉದ್ಧಟತನ ಪ್ರದರ್ಶಿಸುತ್ತಿದ್ದು, ಕೋಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದ ಅವರು ಕೇಂದ್ರ ಸರಕಾರ ಕೂಡಲೇ ಕೇರಳ ಸರಕಾರವನ್ನು ವಿಸರ್ಜಿಸಬೇಕೆಂದು ಒತ್ತಾಯಿಸಿದರು.

Related posts

Leave a Reply