Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಕೇರಳ ವಿಧಾನಸಭೆಯ ವಜ್ರಮಹೋತ್ಸವ ಗಿಳಿವಿಂಡುವಿನಲ್ಲಿ ವಿಜೃಂಭಿಸಿದ ಚಿತ್ರ ಮೇಳ

ಕೇರಳ ವಿಧಾನಸಭೆಯ ವಜ್ರ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ವಿಶೇಷ ಚಿತ್ರ ಮೇಳವು ಮಂಜೇಶ್ವರ ಗೋವಿಂದ ಪೈ ಸ್ಮಾರಕದಲ್ಲಿ ನಡೆಯಿತು.

ಚಿತ್ರ ಮೇಳಕ್ಕೆ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಜಾಕ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕೇರಳ ವಿಧಾನ ಸಭೆಯ ಜ್ಯುಬಿಲಿ ಕಾರ್ಯಕ್ರಮದಂಗವಾಗಿ ಕಾಸರಗೋಡಿನಲ್ಲಿ ನಡೆಯ ಬೇಕಾದ ಕಾರ್ಯಕ್ರಮವನ್ನು ಒತ್ತಾಯದ ಬಳಿಕ ಬಹು ಭಾಷೆಗಳ ಸಂಗಮ ಭೂಮಿಯಾದ ಮಂಜೇಶ್ವರದಲ್ಲಿ ನಡೆಸುವಂತೆ ಸರಕಾರ ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಇವತ್ತು ಖ್ಯಾತ ಕಲಾವಿದರಿಂದ ಚಿತ್ರ ಮೇಳವನ್ನು ಆಯೋಜಿಸಲಾಗಿದೆ. ಸುಮಾರು 20 ಕ್ಕಿಂತ ಮಿಕ್ಕ ಚಿತ್ರಕಾರರು ಚಿತ್ರ ಪಡಿಸಲಿದ್ದಾರೆ. ಇದರ ಸದುಪಯೋಗವನ್ನು ಮಂಜೇಶ್ವರದ ವಿದ್ಯಾರ್ಥಿಗಳು ಹಾಗೂ ನಾಗರಿಕರು ಪಡೆಯಲಿರುವುದಾಗಿ ಅವರು ತಿಳಿಸಿದರು.

ಕೇರಳ ತುಳು ಅಕಾಡೆಮಿ ಅಧ್ಯಕ್ಷ ಡಾ.ಪಿ.ಎಸ್ ಪುಣಿಂಚಿತ್ತಾಯ ಚಿತ್ರರಚನೆಗೆ ಚಾಲನೆ ನೀಡಿದರು. ಈ ಸಂದರ್ಭ ಜನಪ್ರತಿನಿಧಿಗಳ ಸಹಿತ ಹಲವಾರ ಮಂದಿ ಪಾಲ್ಗೊಂಡರು. ಚಿತ್ರ ಮೇಳದಲ್ಲಿ ರಚನೆಗೊಂಡ ಚಿತ್ರಗಳನ್ನು ಜ.೪ ಮತ್ತು ೫ರಂದು ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುವ ಚಿತ್ರ ಪ್ರದರ್ಶನದಲ್ಲಿ ಪ್ರದರ್ಶಿತಗೊಳ್ಳಲಿವೆ.

Related posts

Leave a Reply