Header Ads
Header Ads
Breaking News

ಕೇರಳ ಸಂರಕ್ಷಣಾ ಉತ್ತರವಲಯ ಜಾಥಕ್ಕೆ ಚಾಲನೆ

ಉಪ್ಪಳ : ಕೇರಳ ಸಂರಕ್ಷಣಾ ಉತ್ತರವಲಯ ಜಾಥಕ್ಕೆ ಸಿಪಿಐ (ಎಂ) ಪೊಲಿಟ್ ಬ್ಯುರೋ ಪ್ರಧಾನ ಕಾರ್ಯುದರ್ಶಿ ಸೀತಾರಾಮ್ ಯಚೂರಿಯವರು ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಚಾಲನೆ ನೀಡಿದರು. ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಜಾಥಾಕ್ಕೆ ನೇತೃತ್ವ ನೀಡಿದರು.

 

ಈ ಸಂದರ್ಭದಲ್ಲಿ, ಬಡವರ ಸಾಲವನ್ನು ಮನ್ನಾಗೊಳಿಸಲು ಮೀನ ಮೇಷ ಎಣಿಸಿಕೊಂಡು ಕೋಟ್ಯಾಂತರ ರೂಪಾಯಿಗಳನ್ನು ಬ್ಯಾಂಕಿನಿಂದ ಪಡೆದು ಅದನ್ನು ಮರು ಪಾವತಿಸದೆ ವಿದೇಶಕ್ಕೆ ಪಲಾಯಣ ಗೈಯುತ್ತಿರುವವರಿಗೆ ಪರೋಕ್ಷವಾಗಿ ಬೆಂಬಲವನ್ನು ನೀಡುತ್ತಿರುವ ಮೋದಿ ಸರಕಾರ ಈ ಐದು ವರ್ಷಗಳ ಕಾಲಾವಧಿಯಲ್ಲಿ ಬಡವರ ಸಂರಕ್ಷಣೆಗಾಗಿ ಏನು ಮಾಡಿದೆ ಎಂದು ಅವರು ಪ್ರಶ್ನಿಸಿದರು.
ಎಲ್ ಡಿ ಎಫ್ ರಾಜ್ಯ ಘಟಕದಲ್ಲಿರುವ ಹತ್ತು ಪಕ್ಷಗಳ ನೇತಾರರು ಜಾಥಾದಲ್ಲಿ ಭಾಗವಹಿಸಿದರು.
ಕೇರಳ ಸಂರಕ್ಷಣಾ ಯಾತ್ರೆ ಎಂಬ ನಾಮಧೇಯದಲ್ಲಿ ಬಿಜೆಪಿಯನ್ನು ಹೊರದಬ್ಬಿರಿ ರಾಷ್ಟ್ರವನ್ನು ರಕ್ಷಿಸಿರಿ ಎಡ ಪಕ್ಷ ಜನಪಕ್ಷ ಎಂಬ ಘೋಷಣೆಯೊಂದಿಗೆ ಜಾಥಾ ಪ್ರಯಾಣವನ್ನು ಆರಂಭಿಸಿತು.
ಫೆಬ್ರವರಿ 23 ರಂದು ಜಾಥಾ ತ್ರಿಶೂರಿನಲ್ಲಿ ಸಮಾಪ್ತಿಗೊಳ್ಳಲಿದೆ. ಇದರ ಜೊತೆಯಾಗಿ ತಿರವನಂತಪುರದಿಂದ ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಎಸ್ ಸುಧಾಕರ ರೆಡ್ಡಿ ಚಾಲನೆ ನೀಡಿದ ದಕ್ಷಿಣ ವಲಯ ಜಾಥಾ ಕೂಡಾ ತ್ರಿಶೂರಿನಲ್ಲಿ ಸಮಾಪ್ತಿಗೊಳ್ಳಲಿದೆ.

 

Related posts

Leave a Reply

Your email address will not be published. Required fields are marked *