Header Ads
Breaking News

ಕೇಲ್ದೋಡಿಯ ಶ್ರೀ ವೈದ್ಯನಾಥ, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತದಲ್ಲಿ ನಡೆದ ನೇಮೋತ್ಸವ

ಬಂಟ್ವಾಳ: ಶ್ರೀ ವೈದ್ಯನಾಥ, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತ್ರ ಕೇಲ್ದೋಡಿ ಇಲ್ಲಿ ವಾರ್ಷಿಕ ಬ್ರಹ್ಮಬೈದರ್ಕಳ ಮಂಗಳವಾರ ರಾತ್ರಿ ವಿಜ್ರಂಭಣೆಯಿಂದ ನಡೆಯಿತು. ರಾತ್ರಿ 9 ಗಂಟೆಯ ವೇಳೆಗೆ ಬೈದರ್ಕಳು ಒಲಿಮರೆಯಿಂದ ಹೊರಡುವ ದೃಶ್ಯ ಮನಮೋಹಕವಾಗಿತ್ತು. ಈ ಸಂದರ್ಭ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾಜರಿದ್ದು ಬ್ರಹ್ಮಬೈದರ್ಕಳ ನೇಮೋತ್ಸವ ವೀಕ್ಷಿಸಿದರು.

ಬಳಿಕ ದೈವದ ಗಂಧ ಪ್ರಸಾದ ಸ್ವೀಕರಿಸಿದರು. ಬೈದರ್ಕಳು ಬಾಕಿಮಾರು ಗದ್ದೆಗೆ ಇಳಿಯುವುದು, ಬೈದರ್ಕಳು ಪಾತ್ರಿಗಳು ದರ್ಶನ ಆಗಿ ಸುರ್ಯ ಹಾಕಿಕೊಳ್ಳುವುದು ಬಳಿಕ ಮಾಯಾಂದಲೆ ದೈವದ ನೇಮೋತ್ಸವ ನಡೆಯಿತು. ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಅಂಚನ್, ಕೇಲ್ದೋಡಿಗುತ್ತುವಿನ ಕೋಟಿ ಪೂಜಾರಿ, ಉಪಾಧ್ಯಕ್ಷ ಕರುಣೇಂದ್ರ ಪೂಜಾರಿ, ಕಾರ್ಯದರ್ಶಿ ಆನಂದ ಕೋಟ್ಯಾನ್, ಕೋಶಾಧಿಕಾರಿ ಗೋಪಾಲ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *