Header Ads
Header Ads
Breaking News

ಕೇಶವ ಕೋಟೇಶ್ವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ನೊಂದ ಮಹಿಳೆಯಿಂದ ಕೋಟ ಠಾಣೆಯಲ್ಲಿ ದೂರು

ತೆಕ್ಕಟ್ಟೆ-ಕೆದೂರಿನಲ್ಲಿರುವ ಸ್ಪೂರ್ತಿ ಗ್ರಾಮಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ಕಾರ್ಯದರ್ಶಿ ಕೇಶವ ಕೋಟೇಶ್ವರ ತನಗೆ ಲೈಂಗಿಕ ದೌರ್ಜನ್ಯ ಹಾಗೂ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿ ನೊಂದ ಮಹಿಳೆಯೋರ್ವಳು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿ ಈ ಸಂಸ್ಥೆಯಲ್ಲಿ ಸದಸ್ಯೆಯಾಗಿ ಕಾರ್‍ಯ ನಿರ್ವಹಿಸುತ್ತಿದ್ದ ಮಹಿಳೆಯೋರ್ವಳಿಗೆ ಆಕೆಯ ಸಂಬಳದ 1.50 ಲಕ್ಷ ನೀಡದೆ ವಂಚಿಸಿದ್ದಾರೆ. ಈ ಕುರಿತು ಆಕೆ ವಿಚಾರಿಸಿದಾಗ ಲೈಂಗಿಕ ದೌರ್ಜನ್ಯವನ್ನು ನೀಡಿದ್ದು, ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾನೆ. ನವಂಬರ್ 1 ರಂದು ನಡೆದ ಸಂಸ್ಥೆಯ ಮಹಾಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿದಾಗ ಆರೋಪಿ ಕೇಶವ ಕೋಟೇಶ್ವರ ಸಂಸ್ಥೆಗೆ ರಾಜೀನಾಮೆ ಕೊಡುವಂತೆ ಹಾಗೂ ಸಭೆಯಿಂದ ಹೊರ ನಡೆಯುವಂತೆ ತನಗೆ ಬೆದರಿಕೆ ಹಾಕಿದ್ದಾನೆ. ಜತೆಗೆ ಖಾಲಿ ಹಾಳೆಯ ಮೇಲೆ ಒತ್ತಾಯ ಪೂರ್ವಕವಾಗಿ ಸಹಿಗಳನ್ನು ಪಡೆದಿರುತ್ತಾನೆ.

ತನಗಾದ ಅನ್ಯಾಯದ ಕುರಿತು ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ನೊಂದ ತನಗೆ ನ್ಯಾಯ ಒದಗಿಸಬೇಕು ಎಂದು ಆರೋಪಿಸಿ ಸಂತ್ರಸ್ತೆ ಕೋಟ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಪ್ರಕರಣದ ಸಂತ್ರಸ್ತೆ ತನಗೆ ನ್ಯಾಯ ಒದಗಿಸಿಕೊಡುವಂತೆ ಕುಂದಾಪುರ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ರಾಧ ದಾಸ್ ಅವರನ್ನು ಸಂಪರ್ಕಿಸಿದ್ದು, ಇದೀಗ ದಾಸ್ ಅವರು ಈಕೆಯ ಪರ ಹೋರಾಟ ನಡೆಸುತ್ತಿದ್ದಾರೆ.

Related posts