Header Ads
Header Ads
Breaking News

ಕೈರಂಗಳ ಗೋ ಶಾಲೆಯಿಂದ ಹಸುಗಳನ್ನು ಕದ್ದೊಯ್ದ ಪ್ರಕರಣ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಹಿಂದೂ ಜಾಗರಣಾ ವೇದಿಕೆಯ ರಾಧಾಕೃಷ್ಣ ಹೇಳಿಕೆ

ಪುತ್ತೂರು: ಕೈರಂಗಳ ಪುಣ್ಯ ಕೋಟಿನಗರದ ಅಮೃತಧಾರ ಗೋ ಶಾಲೆಯಿಂದ ಹಸುಗಳನ್ನು ದರೋಡೆ ಮಾಡಿದ ಆರೋಪಿಗಳನ್ನು ಇನ್ನೆರಡು ದಿವಸಗಳೊಳಗೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲೆಯಾದ್ಯಂತ ಸಂವಿಧಾನಾತ್ಮಕವಾಗಿ ನೂರಾರು ಕಡೆಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯರವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಗೋ ಕಳವು ನಿರಂತರವಾಗಿ ನಡೆಯುತ್ತಿದೆ. ಆರಂಭದ ಹಂತದಲ್ಲಿ ಮೇವಿಗೆ ಗುಡ್ಡಕ್ಕೆ ಬಿಟ್ಟ ಗೋವನ್ನು ಕದಿಯುತ್ತಿದ್ದ ಗೋ ಕಳ್ಳರು ಹಿತ್ತಲಲ್ಲಿ ಕಟ್ಟಿದ ಗೋವನ್ನು ಕದೊಯುತ್ತಿದ್ದರು. ಬಳಿಕ ಹಟ್ಟಿಯಿಂದಲೂ ರಾತ್ರಿ ಹೊತ್ತು ಕಳವು ಮಾಡಲಾಗುತ್ತಿತ್ತು. ಕಳೆದ 2 ವರ್ಷಗಳಿಂದ ಮನೆ ಮನೆಗಳ ಹಟ್ಟಿಗಳಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಬೆದರಿಸಿ ಗೋವನ್ನು ದರೋಡೆ ಮಾಡುವ ಹಂತಕ್ಕೆ ಬಂದಿದ್ದಾರೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೂ ಪಾತಕಿಗಳ ಪತ್ತೆ ಆಗುತ್ತಿಲ್ಲ. ಕೈರಂಗಳದ ಆಸುಪಾಸಿನ ಮನೆಗಳಿಂದ ಜೀವನಾಧರಕ್ಕೆ ಸಾಕುತ್ತಿದ್ದ ಸುಮಾರು 75ಕ್ಕಿಂತ ಹೆಚ್ಚು ಹಸುಗಳು ಕಳವಾಗಿದೆ. ಒಬ್ಬನೆ ಒಬ್ಬ ಕಳ್ಳ ಪತ್ತೆಯಾಗಿಲ್ಲ. ಮುಂದೆ 2 ದಿನಗಳೊಳಗೆ ಆರೋಪಿಗಳ ಬಂಧನ ಆಗದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಯಲಿದೆ. ಅಲ್ಲೂ ಸ್ಪಂಧನೆ ಸಿಗದಿದ್ದಲ್ಲಿ ಹಂತ ಹಂತವಾಗಿ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಿಂಜಾವೆಯ ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ರವಿರಾಜ್ ಬಿ.ಸಿ.ರೋಡ್, ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಹೋರಾಟ್ ಪ್ರಮುಖ್ ಅವಿನಾಶ್ ಪುರುಷರಕಟ್ಟೆ, ತಾಲೂಕು ಅಧ್ಯಕ್ಷ ಚಿನ್ಮಯ ರೈ ಉಪಸ್ಥಿತರಿದ್ದರು