Header Ads
Header Ads
Breaking News

ಕೈರಂಗಳ ಪುಣ್ಯಕೋಟಿ ನಗರದಲ್ಲಿ ದನ ಕಳವು ಪ್ರಕರಣ ಮೂರನೇ ದಿನಕ್ಕೆ ಅಮರಣಾಂತ ಉಪವಾಸ ರಾತ್ರಿ ಜಾಗರಣೆಯೊಂದಿಗೆ ಗೋ ಪ್ರೇಮಿಗಳ ಧರಣಿ ಪುಣ್ಯಕೋಟಿ ನಗರದಲ್ಲಿ ದನ ಕಳೆದುಕೊಂಡವರ ಸಮಾವೇಶ

 

ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣೆಗಳಲ್ಲಿ ಹಲವು ಗೋಕಳವು ಪ್ರಕರಣ ದಾಖಲಾಗಿದ್ದರೂ ಆರೋಪಿಗಳ ಸುಳಿವು ಸಿಗುತ್ತಿಲ್ಲ, ಘಟನೆ ನಿರಂತರವಾಗಿ ಮುಂದುವರಿಯುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಗೋಕಳ್ಳತನ, ಗೋಸಾಗಾಟ, ಅಕ್ರಮ ಕಸಾಯಿಖಾನೆ, ಗೋಹತ್ಯೆಗೆ ಇಲ್ಲಿನ ಶಾಸಕ-ಸಚಿವರು ಪ್ರೋತ್ಸಾಹ ನೀಡುತ್ತಿರುವ ಸಂಶಯ ಇದೆ ಎಂದು ವಿಶ್ವ ಹಿಂದು ಪರಿಷತ್ ವಿಭಾಗ ಕಾರ್‍ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.ಕೈರಂಗಳ ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆಯಿಂದ ಗೋ ಕಳವು ನಡೆಸಿದ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಿರಂತರವಾಗಿ ಎರಡನೇ ದಿನಕ್ಕೆ ಕಾಲಿಟ್ಟ ಟಿ.ಜಿ.ರಾಜಾರಾಂ ಭಟ್ ನೇತೃತ್ವದ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ವಿ.ಹಿಂ.ಪ ಮತ್ತು ಬಜರಂಗದಳ ಬೆಂಬಲ ಸೂಚಿಸುತ್ತಿರುವ ಕುರಿತು ಕುತ್ತಾರು ಶ್ರೀ ಬಾಲಸಂರಕ್ಷಣಾ ಕೇಂದ್ರದಲ್ಲಿ ಸೋಮವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಗೋಹತ್ಯೆ, ಅಕ್ರಮ ಕಸಾಯಿಖಾನೆ, ಗೋಕಳವಿನ ಅಟ್ಟಹಾಸ ನಿರಂತರವಾಗಿ ಉಳ್ಳಾಲ ಮತ್ತು ಕೊಣಾಜೆ ಭಾಗಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಮೇ. 29ರಂದು ಕೈರಂಗಳದ ಅಮೃತಧಾರಾ ಗೋಶಾಲೆಯಿಂದ ದನವನ್ನು ಕಳವು ನಡೆಸಿ ತಡೆಯಲು ಬಂದ ಗೋಶಾಲೆ ಜನರನ್ನು ಬೆದರಿಸಿ ಕಾರಿನಲ್ಲಿ ಕಳವು ನಡೆಸಲಾಗಿದೆ. ಗೋಕಳ್ಳರ ಕೃತ್ಯವನ್ನು ವಿಶ್ವ ಹಿಂದು ಪರಿಷತ್, ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ.ಸುದ್ಧಿಗೋಷ್ಠಿಯಲ್ಲಿ ಮಂಗಳ ಸೇವಾ ಟ್ರಸ್ಟ್ ಸಂಚಾಲಕ ಡಾ| ಅನಂತಕೃಷ್ಣ ಭಟ್ , ವಿ.ಹಿಂ.ಪ ಕಾರ್ಯಾಧ್ಯಕ್ಷ ಗೋಪಾಲ ಕುತ್ತಾರ್, ಕಾರ್‍ಯದರ್ಶಿ ರವಿ ಅಸೈಗೋಳಿ, ಬಜರಂಗದಳ ಮುಖಂಡ ಪವಿತ್ರ ಕುಮಾರ್ ಕೆರೆಬೈಲ್ ಉಪಸ್ಥಿತರಿದ್ದರು.