Header Ads
Header Ads
Breaking News

ಕೈರಂಗಳ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ ನಿರ್ದೇಶಕ ರಿಷಬ್ ಶೆಟ್ಟಿ

ಇತ್ತೀಚಿನ ದಿನಗಳಲ್ಲಿ ಆಂಗ್ಲ ವ್ಯಾಮೋಹದಿಂದಾಗಿ ಸರಕಾರಿ ಶಾಲೆಗಳು ಮುಚ್ಚುತ್ತಿದ್ದು, ಇಂತಹ ಶಾಲೆಗಳನ್ನು ಉಳಿಸುವ ಆಂದೋಲನಕ್ಕೆ ಮುಂದಾಗಿದ್ದಾರೆ ಕೆಲವರು. ಅಂತಹದೇ ಕಾರ್ಯಕ್ಕೆ ಕೈಜೋಡಿಸಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ ಅವರು. ಕೈರಂಗಳ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಈಗಗಾಲೇ ಕೈಜೊಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಸಿನಿಮಾ ಚಿತ್ರೀಕರಣಕ್ಕೆ ಒಂದು ಬಾರಿ ಅವಕಾಶ ಕೊಟ್ಟ ಸಂಸ್ಥೆ ಅಥವಾ ಮಾಲೀಕರು ಮತ್ತೆ ಬೇರೊಂದು ಸಿನಿಮಾ ಅಲ್ಲಿ ಚಿತ್ರೀಕರಣ ಮಾಡುತ್ತೇವೆ, ದೊಡ್ಡ ಮೊತ್ತ ಕೊಡುತ್ತೇವೆ ಎಂದು ಜಪ್ಪಯ್ಯ ಅಂದರೂ ಅವಕಾಶ ಕೊಡುವುದಿಲ್ಲ. ಚಿತ್ರೀಕರಣದುದ್ದಕ್ಕೂ ಚಿತ್ರದ ಕಥೆ ಹಾಗೂ ಪತ್ರಾದ ಬಗ್ಗೆ ಗಮನ ಇರುತ್ತದೆಯೇ ಹೊರತು ಆ ತಂಡ ನೈರ್ಮಲ್ಯತೆಗೆ ಆದ್ಯತೆ ಕೊಡುವುದಿಲ್ಲ ಎಂಬ ಕಾರಣದಿಂದ ಮತ್ತೆ ಅಲ್ಲಿ ಬೇರೆ ಸಿನಿಮಾ ತಂಡಕ್ಕೆ ಅವಕಾಶ ಸಿಗುವುದಿಲ್ಲ. ಇನ್ನು ನಿರ್ದೇಶಕನ ಮುಂದಿನ ಸಿನಿಮಾದ ಕಥೆಯೂ ಬೇರೆಯದ್ದೇ ಆಗಿರುವುದರಿಂದ ಲೋಕೇಶನ್ ಬದಲಾಗುತ್ತಿರುವುದರಿಂದ ಸಹಜವಾಗಿಯೇ ತಂಡ ಸಿಹಿ, ಕಹಿ ಘಟನೆಗಳ ಹೊರತುಪಡಿಸಿ ಲೊಕೇಶನ್ ಮರೆಯುತ್ತದೆ. ಸಿನಿಮಾ ಸೋತರೂ ಗೆದ್ದರೂ ಮತ್ತೆ ಶೂಟಿಂಗ್ ಸ್ಪಾಟ್‌ಗೆ ಹೋಗೋದು ವಿರಳ. ಆದರೆ ಈ ಸಾಲಿನ ಯಶಸ್ವಿ ಚಿತ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡುಗೆ: ರಾಮಣ್ಣ ರೈ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರೆಲ್ಲರಿಗಿಂತ ಭಿನ್ನವಾಗಿ ಕಾಣುತ್ತಾರೆ. ತನ್ನ ಚಿತ್ರಕ್ಕೆ ಅತಿ ಮುಖ್ಯವಾಗಿದ್ದ ಶಾಲೆಯ ಹಾಗೂ ಊರಿನ ಜನತೆಯ ಜೊತೆಗೂ ಒಂದು ರೀತಿಯ ಭಾವಾನಾತ್ಮಕ ಸಂಬಂಧ ಬೆಸೆದುಕೊಂಡಿದ್ದು ಸದ್ಯ ಆ ಸಂಬಂಧ ಶಾಲೆ ಹಾಗೂ ಗ್ರಾಮಕ್ಕೆ ದೊಡ್ಡ ಕೊಡುಗೆಯಾಗುತ್ತದೆ ಎಂಬ ಕನಸು ಜನರಲ್ಲಿ ಚಿಗುರೊಡೆದಿದ್ದು ಸಿನಿಮಾ ಐವತ್ತು ದಿನಗಳನ್ನು ಪೂರೈಸುತ್ತಿದ್ದಂತೆಯೇ ಆ ಊರಿನ ಜನತೆ ಸಂಭ್ರಮಿಸಿದ್ದಾರೆ.ಹೌದು, ಕೇವಲ ಮೂರು ಚಿತ್ರಗಳನ್ನಷ್ಟೆವೇ ನಿರ್ದೇಶಿಸಿದರೂ ಆ ಮೂರು ಚಿತ್ರಗಳು ಯಶಸ್ವಿಯಾಗುತ್ತಲೇ ಸ್ಟಾರ್ ನಿರ್ದೇಶಕ ಪಟ್ಟಕ್ಕೇರಿರುವ ರಿಷಬ್ ಶೆಟ್ಟಿ ತನ್ನ ಮಹತ್ವಾಕಾಂಕ್ಷೆಯ ಭಿನ್ನ ಚಿತ್ರವಾಗಿ ಮೂಡಿಬಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಚಿತ್ರೀಕರಣ ನಡೆಸಿದ್ದ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಟಿಂಗ್ ನಡೆಸುತ್ತಿದ್ದಾಗ ಇದ್ದ ವಿದ್ಯಾರ್ಥಿಗಳ ಸಂಖ್ಯೆ 42. ಶೂಟಿಂಗ್ ಮುಗಿಸಿ ಚಿತ್ರ ರಿಲೀಸ್ ಆಗುವುದಕ್ಕೆ ಮುನ್ನವೇ ವಿದ್ಯಾರ್ಥಿಗಳ ಸಂಖ್ಯೆ25ಕ್ಕೆ ಇಳಿದಿದೆ. ಕಾರಣವಿಷ್ಟೆ, ಆಡಳಿತ ಮಂಡಳಿ ನಿರ್ಲಕ್ಷ , ಕೈರಂಗಳ ಶಾಲೆಯ ಆಸುಪಾಸಿನಲ್ಲಿ ಆರಮಭವಾಗಿರುವ ತಲೆಎತ್ತಿರುವ ಆರು ಆಂಗ್ಲಮಾಧ್ಯಮ ಶಾಲೆಗಳು, ವಿದ್ಯಾರ್ಥಿಗಳ ಕೊರತೆಯಿಂದ ವರ್ಗಾವಣೆ ಬಯಸಿದ ಶಿಕ್ಷಕರು, ಪೋಷಕರು ಆರೋಪಿಸುವಂತೆ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಸೇರಿಸುವಂತೆ ಸಲಹೆ ಕೊಟ್ಟಿರುವ ಶಿಕ್ಷಕರು, ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಶಿಕ್ಷಣ ನೀಡುವ ಶಿಕ್ಷಕರು ಹಾಗೂ ಮೂಲ ಸೌಲಭ್ಯಗಳ ಕೊರತೆ ಅದರ ಜೊತೆಗೆ ಅನುದಾನಿತ ಶಾಲೆಯಾದರೂ ಸರಕಾರದ ತಾರತಮ್ಯ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಲು ಕಾರಣವಾಗಿತ್ತು.ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದ್ದು ಶಾಲೆ ಮುಚ್ಚುವ ಆತಂಕದಲ್ಲಿರುವ ಬಗ್ಗೆ ವಿದ್ಯಾರ್ಥಿ ಪೋಷಕರಿಂದ ತಿಳಿದುಕೊಂಡ ರಿಷಬ್ ಶೆಟ್ಟಿ ಅವರ ಮಾತುಗಳಿಗೆ ಧ್ವನಿಯಾಗಿ ಆ ಶಾಲೆಗೆ ಏನಾದರೂ ಮಾಡಬೇಕು ಎಂದು ತನ್ನ ಮಿತ್ರ ಸರಕಾರಿ ಶಾಲೆಗಳ ಉಳಿಸಿ ಆಂಧೋಲನ ನಡೆಸುತ್ತಾ ಈಗಾಗಲೇ ಐದು ಶಾಲೆಗಳನ್ನು ದತ್ತು ಪಡೆದುಕೊಂಡಿರುವ ಅನಿಲ್ ಶೆಟ್ಟಿ ಅವರ ಜೊತೆಗೆ ಸಾಕಷ್ಟು ಗ್ರೌಂಡ್ ವರ್ಕ್ ಮಾಡಿದರು. ತಾನು ಕಲಿತ ಶಾಲೆಯಷ್ಟೆ ಬಾಂಧವ್ಯ ಬೆಸೆದುಕೊಂಡಿರುವ ಕೈರಂಗಳದ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಬೇಕು, ತಮ್ಮ ಕನಸು ನನಸಾಗಲೇಬೇಕು ಎಂದು ಪಣತೊಟ್ಟು ತನ್ನ ತಂಡದೊಂದಿಗೆ ಗುರುವಾರ ಶಾಲೆಯಲ್ಲಿ ನಡೆದ ಶಾರದೋತ್ಸವ ಕಾರ್ಯಕ್ರಮಕ್ಕೆ ಪಾಲ್ಗೊಂಡು ಆಡಳಿತ ಮಂಡಳಿ ಹಾಗೂ ಊರಿನ ಹಿರಿಯರ ಜೊತೆಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದು ಅದರಂತೆ ತನ್ನ ಮನದಾಳದ ಮಾತುಗಳನ್ನು ಸಭೆಯ ಮುಂದೆಯೇ ಹಂಚಿಕೊಂಡರು.

Related posts

Leave a Reply