Breaking News

ಕೊಂಕಣಿ ಕುಟಮ್ ಬಾಹ್ರೇನ್ ಹದಿನಾರನೇ ಕೊಂಕಣಿ ಕುಟಮ್ ಸಾಹಿತ್ಯ ಪ್ರಶಸ್ತಿ ಡಾ. ಜೆರಾಲ್ಡ್ ಪಿಂಟೊ ರವರಿಗೆ ಪ್ರಶಸ್ತಿ

2017 ನೇ ಸಾಲಿನ ಕೊಂಕಣಿ ಕುಟಮ್ ಬಾಹ್ರೇನ್ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಸಾಹಿತಿ ಡಾ. ಜೆರಾಲ್ಡ್ ಪಿಂಟೊ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಥಳೀಯ ಸಂಚಾಲಕರಾದ ರಿಚರ್ಡ್ ಮೊರಾಸ್ ಹೇಳಿದರು.


ಮಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಜೆರಿ ನಿಡ್ಡೋಡಿ ಅವರ ೬ ಕಾದಂಬರಿಗಳು,೭೫ ಕತೆಗಳು ಹಾಗೂ ೯೦೦ಕ್ಕೂ ಮೇಲ್ಪಟ್ಟು ಲೇಖನಗಳು ಕೊಂಕಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಅಲ್ಲದೆ ಸಂಶೋಧನಾ ಗ್ರಂಥ, ಕೃತಿಯನ್ನು ಕೂಡ ಪ್ರಕಟಿಸಿದ್ದಾರೆ ಎಂದ ಅವರು, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಗಸ್ಟ್ ೧೦ರಂದು ಸೈಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಸಭಾಂಗಣ, ಬೆಂದೂರ್‌ನಲ್ಲಿ ನಡೆಯಲಿದೆ ಎಂದರು. ಇನ್ನು ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ಟೈಟಸ್ ನೊರೊಹ್ನಾ, ಸ್ಟ್ಯಾನಿ ಲೋಬೊ, ಸಿಜೈಸ್ ತಾಕೊಡೆ, ಲೆಸ್ಲಿ ರೇಗೊ ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply