Header Ads
Header Ads
Breaking News

ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಪ್ರತಿಷ್ಠಾ ದಿನಾಚರಣೆ

ಮಂಜೇಶ್ವರ: ಭೂಮಿಯ ಮೇಲಿನ ಪುಣ್ಯಪ್ರದವಾದ ಮಾನವ ಬದುಕು ವ್ಯರ್ಥವಾಗಿ ಹೋಗಬಾರದು. ಭಗವಂತನ ಅನುಗ್ರಹದೊಂದಿಗೆ ತ್ಯಾಗಮಯಿಯಾಗಿ ಬದುಕಿ ಸರ್ವವನ್ನೂ ಅರ್ಪಿಸಿಕೊಂಡಾಗ ಬದುಕು ಸಾರ್ಥಕತೆ ಪಡೆಯುತ್ತದೆ. ಪ್ರತಿಯೊಬ್ಬನ ಪುಟ್ಟ ಕೈಂಕರ್ಯವೂ ಸಮಾಜದ ಹಿತ ದೃಷ್ಟಿಯಿಂದ ಇರಬೇಕು ಎಂದು ಕೊಂಡೆವೂರು ಸದ್ಗುರು ನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಂಡೆವೂರು ಶ್ರೀಸದ್ಗುರು ನಿತ್ಯಾನಂದ ಯೊಗಾಶ್ರದ ಶ್ರೀಗುರುಪೀಠ ಪ್ರತಿಷ್ಠೆಯ17ನೇ ವಾರ್ಷಿಕ ದಿನಾಚರಣೆ ಮತ್ತು ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಯ ಅಂಗವಾಗಿ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಅವರು ಅನುಗ್ರಹ ಸಂದೇಶ ನೀಡಿದರು.

ಕೇಂದ್ರ ಆಯುಷ್ ಖಾತೆ ಹಾಗೂ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ ಯಸ್ಸೋ ನಾಯಕ್ ಮಾತನಾಡಿ ವ್ಯಕ್ತಿಯು ಶಕ್ತಿಯಾಗಿ ಬೆಳೆಯಬೇಕಿದ್ದರೆ ಆಧ್ಯಾತ್ಮದ ತಳಹದಿಯ ಬೆಳ್ಗೊಡೆಯ ಅಗತ್ಯ ಇದೆ. ಸಮಾಜವನ್ನು ಶಕ್ತಿಯುತವಾಗಿ ಮುನ್ನಡೆಸುವಲ್ಲಿ ರಾಷ್ಟ್ರದ ಪೂರ್ವ ಕಾಲದಿಂದಲೂ ಆಧ್ಯಾತ್ಮ, ಸಂತ-ಶರಣರು ಇಂತಹ ಮಾರ್ಗದರ್ಶಿಗಳಾಗಿ ಮುನ್ನಡೆಸಿದ್ದಾರೆ ಎಂದರು.ಕರ್ನಾಟಕ ಬ್ಯಾಂಕ್ ನ ಕಾರ್ಯನಿರ್ವಹಣಾಧಿಕಾರಿ ಹಾಗೂ ನಿರ್ವಾಹಕ ನಿರ್ದೇಶಕ ಮಹಾಬಲೇಶ್ವರ ರಾವ್, ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದು ಬೆಂಗಳೂರಿನ ಉದ್ಯಮಿ ವಿ.ಸುಬ್ರಹ್ಮಣ್ಯ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *