Header Ads
Breaking News

ಕೊಕ್ಕಡದ ವಿನ್ಸೆಂಟ್ ಮಿನೇಜಸ್‍ರ ಸಾಂತಾಕ್ಲಾಸ್ ಯಾತ್ರೆ

ಕೊಕ್ಕಡ: ಕಳೆದ ಎರಡು ದಶಕಗಳಿಂದ ಪ್ರತೀ ವರ್ಷ ಕ್ರಿಸ್‍ಮಸ್ ಹಬ್ಬದ ಸಂದರ್ಭಗಳಲ್ಲಿ ಜಿಲ್ಲೆಯಾದ್ಯಂತ ಕ್ರಿಸ್‍ಮಸ್ ಹಬ್ಬ ಮತ್ತು ನಮ್ಮ ದೇಶದ ಭಾವೈಕ್ಯತೆಯನ್ನು ಸಾರುತ್ತಾ ಸಾಗುತ್ತಿರುವ ಕೊಕ್ಕಡದ ಸಾಂತಕ್ಲಾಸ್ ಯಾತ್ರೆಯ ಖ್ಯಾತಿಯ ಕೊಕ್ಕಡದ ವಿನ್ಸೆಂಟ್ ಮಿನೇಜಸ್ ಅವರ 20ನೇ ವರ್ಷದ ಸಾಂತಾಕ್ಲಾಸ್ ಯಾತ್ರೆ ಕೊಕ್ಕಡದ ಆಟೋ ರಿಕ್ಷಾ ನಿಲ್ದಾಣದಿಂದ ಆರಂಭಗೊಂಡಿತು. ಪ್ರಧಾನಿ ಮೋದಿಯವರ ಸ್ವಚ್ಛ ಭಾರತದ ಪರಿಕಲ್ಪನೆಯನ್ನು ತನ್ನ ಸಾಂತಾಕ್ಲಾಸ್ ಯಾತ್ರೆಯ ಜೊತೆಗೆ ಸಮೀಕರಿಸಿ ಪರಿಸರ ರಕ್ಷಣೆ ಮಾಡಲು ಪ್ರೇರೇಪಿಸುವ ಗಿಡಮರ ಬೆಳೆಸಿ, ಪರಿಸರವನ್ನು ಉಳಿಸಿ, ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ , ಸ್ವಚ್ಛ ಭಾರತ ನಿರ್ಮಿಸಿ, ಜಾಗತಿಕ ತಾಪಮಾನ ಎಚ್ಚರ ವಹಿಸೋಣ ಮುಂತಾದ ಸ್ಲೋಗನ್‍ಗಳನ್ನು ಪೋಸ್ಟರ್ ಮೂಲಕ ತನ್ನ ವಾಹನದಲ್ಲಿರಿಸಿ ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಸಂದೇಶದ ಜೊತೆಗೆ ಪರಿಸರ ಕಾಳಜಿಯನ್ನು ವಿಶೇಷವಾಗಿ ವ್ಯಕ್ತಪಡಿಸಿರುವ ಕೊಕ್ಕಡದ ಸಾಂತಾಕ್ಲಾಸ್ ವಿನ್ಸೆಂಟ್ ಮಿನೇಜಸ್ ರವರಿಗೆ ಕೊಕ್ಕಡ ಆಟೋ ಸ್ಟ್ಯಾಂಡಿನಲ್ಲಿ ಊರವರ ಪರವಾಗಿ ಅಭಿನಂದನೆಯನ್ನು ಸಲ್ಲಿಸಿ ಕಳುಹಿಸಿಕೊಡಲಾಯಿತು.

Related posts

Leave a Reply

Your email address will not be published. Required fields are marked *