
ತುಳುನಾಡಿನ ಪ್ರಸಿದ್ದ ಕೊಕ್ಕಡ ಸೀಮೆಯೊಡೆಯ ಶ್ರೀ ವೈದ್ಯನಾಥೇಶ್ವರ, ವಿಷ್ಣುಮೂರ್ತಿ ದೇವರ ಗದ್ದೆಯಲ್ಲಿ ತುಳುನಾಡ ಸಂಸ್ಕೃತಿಯ ದ್ಯೋತಕವಾಗಿ ಪ್ರತೀ ವರ್ಷ ನಡೆಯುತ್ತಿರುವ ಕೊಕ್ಕಡ ಕೋರಿ ಜಾತ್ರೆಯು ನಡೆಯಿತು.
ಶ್ರೀ ಕೊಕ್ಕಡ ದೇವಳದಿಂದ ಅನತಿ ದೂರದಲ್ಲಿರುವ ದೇವಳದ ಗದ್ದೆಗೆ ಎರಡೂ ದೇವರುಗಳು ಮೆರವಣಿಗೆಯಲ್ಲಿ ಸಾಗಿ ಕೋರಿ ಗದ್ದೆಯಲ್ಲಿ ಉಳುಮೆ ಮಾಡಿದ ಗದ್ದೆಯ ಮದ್ಯೆ ಪೂಕರೆಯನ್ನ ಹಾಕುವ ಕಾರ್ಯ ನಡೆಯಿತು. ನಂತರ ಭಂಡಾರಿ ಮಜಲಿನ ಕಟ್ಟೆಯಲ್ಲಿ ವಿರಾಜಮಾನರಾದ ದೇವರುಗಳಿಗೆ ಕಟ್ಟೆಪೂಜೆಯು ಸ್ಥಳೀಯ ನಾಗಬ್ರಹ್ಮ ದೈವಗಳ ಉಪಸ್ಥಿತಿಯಲ್ಲಿ ನಡೆದು ಕೊಕ್ಕಡ ಕೋರಿ ಜಾತ್ರೆ ಸಂಜೆ ವೇಳೆ ಸಂಪನ್ನವಾಯಿತು..ಕೋರಿ ಜಾತ್ರೆಗೆ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.