Breaking News

ಕೊಕ್ರಾಣಿ ಕುದ್ರು ರಸ್ತೆ ಸಂಪರ್ಕ ಸೇತುವೆ ಕಾಮಗಾರಿ,  ಕಾಪು ಶಾಸಕ ವಿನಯಕುಮಾರ್ ಸೊರಕೆ ಶಿಲಾನ್ಯಾಸ


ಮೂಲ್ಕಿ ಕಡವಿನ ಬಾಗಿಲು ಬಳಿಯ ೬ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೆಜಮಾಡಿಯ ಕೊಕ್ರಾಣಿ ಕುದ್ರು ರಸ್ತೆ ಮತ್ತು ಸಂಪರ್ಕ ಸೇತುವೆ ಕಾಮಗಾರಿಯ ಶಿಲಾನ್ಯಾಸ ನೆರವೇರಿತು.
ಶಿಲನ್ಯಾಸ ನಡೆಸಿ ಮಾತನಾಡಿದ ಕಾಪು ಶಾಸಕ ವಿನಯಕುಮಾರ್ ಸೊರಕೆ, ಕುದ್ರು ಬಾಗದ ಈ ಸೇತುವೆ ನಿರ್ಮಾಣದಿಂದ ಮೂಲ್ಕಿಯಿಂದ ಪಲಿಮಾರು ತನಕ ನೇರ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ. ಮುಂದೆ ಈ ಭಾಗದ ಯಾವುದೇ ಜ್ವಲಂತ ಸಮಸ್ಯೆ ಇದ್ದಲ್ಲಿ ಶೀಘ್ರ ಪರಿಹರಿಸಲಾಗುವುದು ಎಂದು ಭರವಸೆಯನ್ನ ನೀಡಿದರು. ಈ ಕಾರ್ಯಕ್ರಮವನ್ನ ಕಾರ್ನಾಡು ಕೋಸೆಸಾಂ ಚರ್ಚ್ ಪಾಲನಾ ಸಮಿತಿ ಹಾಗೂ ರಸ್ತೆ ಅಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಲಾಗಿದ್ದು, ಗಾಂಧಿಪಥ ಗ್ರಾಮ ಪಥ ಹಂತ-೪ ರಸ್ತೆ ಯೋಜನೆಯಡಿ ರಸ್ತೆ ಕಾಮಗಾರಿಯನ್ನ ಕೈಗೆತ್ತಿಗೊಳ್ಳಲಾಗಿದೆ.
ಈ ವೇಳೆ ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ಈ ಯೋಜನೆಗೆ ಸೊರಕೆಯವರ ಕೊಡುಗೆ ಅದ್ಭುತ, ಅದಕ್ಕಾಗಿ ಅವರಿಗೆ ಈ ಭಾಗದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಬೇಕು ಎಂದರು. ಕೆಥೋಲಿಕ್ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷರಾದ ಅತಿವಂದನೀಯ ಡಾ. ಅಲೋಶಿಯಸ್ ಪೌಲ್ ಡಿಸೋಜಾ ಮತ್ತು ಶ್ರೀ ಕ್ಷೇತ್ರ ಕಟೀಲು ದೇವಳದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ, ಮೂಲ್ಕಿ ಕಡವಿನಬಾಗಿಲು ಜುಮ್ಮಾ ಮಸೀದಿ ಇಮಾಮ್ ಜನಾಬ್ ಮುಹಮ್ಮದ್ ನೂರ್ ಆಲಂ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply