Header Ads
Header Ads
Breaking News

ಕೊಟ್ಟದ್ದನ್ನು ನೆನಪು ಇಟ್ಟುಕೊಳ್ಳುವ ಕಾರ್ಯವಾಗಬೇಕು: ಶಕುಂತಳಾ ಶೆಟ್ಟಿ ಹೇಳಿಕೆ

ವಿಟ್ಲ: ಜವಾಬ್ದಾರಿ ಕೊಟ್ಟಾಗ ಅಭಿವೃದ್ಧಿ ಮಾಡಬೇಕಾಗಿರುವುದು ಕರ್ತವ್ಯ. ಜೆಡ್ಡು -ವಧ್ವ – ಕಾನತ್ತಡ್ಕ ರಸ್ತೆಯನ್ನು 50ಲಕ್ಷ ರೂ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಕೊಟ್ಟದ್ದನ್ನು ನೆನಪು ಇಟ್ಟುಕೊಳ್ಳುವ ಕಾರ್ಯವಾಗಬೇಕು. ಎಲ್ಲರಿಗೂ ಆರೋಗ್ಯ ಪಾಲಿಸುವ ಮೂಲಕ ಕ್ಷೇತ್ರ ಹೆಸರುವಾಸಿಯಾಗಲಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.ಅವರು ಸೋಮವಾರ ಅಳಿಕೆ ಗ್ರಾಮದ ಜೆಡ್ಡು ಶ್ರೀ ಆದಿ ಧನ್ವಂತರಿ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಧನ್ವಂತರಿ ಹವನದ ಸಭಾಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವರ್ಷವೂ ನೀಡುವ ಜೆಡ್ಡು ಆಯುರ್ವೇದ ಪುರಸ್ಕಾರವನ್ನು ಬಳ್ಳಾರಿ ತಾರಾನಾಥ ಸರ್ಕಾರಿ ಆಯುರ್ವೇದ ಮಹಾ ವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಎಸ್. ಸಿ. ಹೂಗಾರ್ ಅವರಿಗೆ ನೀಡುವ ಬಗ್ಗೆ ಘೋಷಣೆ ಮಾಡಲಾಯಿತು.ಬೆಳಿಗ್ಗೆ ಶ್ರೀ ಗಣಪತಿ ಹವನ, ಶ್ರೀ ಧನ್ವಂತರಿ ಹವನ ಆರಂಭ, ಭಜನಾ ಕಾರ್ಯಕ್ರಮ, ಶ್ರೀ ಧನ್ವಂತರಿ ದೇವರ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು. ಕಾನ ಈಶ್ವರ ಭಟ್ ಅವರ 51ನೇ ಹುಟ್ಟಿದ ಪ್ರಯುಕ್ತ ಫಲಾನುಭವಿಗಳಿಗೆ 12 ಸೀರೆ ವಿತರಣೆ ಮಾಡಲಾಯಿತು.ಅಳಿಕೆ ಜೆಡ್ಡು ಆಯುರ್ವೇದ ಸೇವಾ ಟ್ರಸ್ಟ್ ಅಧ್ಯಕ್ಷ ಜೆಡ್ಡು ನಾರಾಯಣ ಭಟ್, ವಕೀಲ ಮೋಹನ ಮೈರ, ಗದಗ ಮಹಾವೀರ ಜೈನ್ ಆಯುರ್ವೇದ ಮಹಾವಿದ್ಯಾಲಯದ ಡೀನ್ ಡಾ. ಜಿ ಎಸ್ ಗೋಪಾಲಕೃಷ್ಣ, ಮೈಸೂರು ಕಾವೇರಿ ಜನಾರ್ದನ ಟ್ರಸ್ಟ್ ನ ಕಾವೇರಿ ಬಾಯಿ, ಡಾ. ಗಣಪತಿ ಭಟ್ಟ,ನರಸಿಂಹ ಬಲ್ಲಾಳ್ , ಡಾ. ಮನೋರಮಾ ಜಿ. ಭಟ್ ಇದ್ದರು.

Related posts

Leave a Reply