Header Ads
Header Ads
Breaking News

ಕೊಡಗಿನಲ್ಲಿ ನಡೆದ ಜಲಪ್ರಳಯಕ್ಕೆ ಕೇಂದ್ರ ಸರ್ಕಾರ ನೆರವು ಘೋಷಿಸಿಲ್ಲ.

ಕೊಡಗಿನಲ್ಲಿ ನಡೆದ ಬೀಕರ ಜಲಪ್ರಳಯಕೆ ಕೇಂದ್ರ ಸರ್ಕಾರ ನೆರವು ಇನ್ನೂ ಘೋಷಿಸಿಲ್ಲ. ಕೇಂದ್ರ ತನ್ನ ರಾಜಕೀಯ ಬದಿಗಿಡಬೇಕು, ಕನ್ನಡಿಗರ, ಕೊಡಗಿನ ಜನರ ಮನಸ್ಸನ್ನ ನೋಯಿಸಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ವಿನಂತಿಸಿದ್ದಾರೆ.ಉಡುಪಿಯಲ್ಲಿ ನೆರೆ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಸಹಾಯ ಮಾಡದಿರುವುದರಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದೇವೆ ಎಂಬ ಭಾವನೆ ಕೊಡವರಲ್ಲಿ ಮೂಡಲು ಶುರುವಾಗಿದೆ. ಕಾಲ ಮಿಂಚಿಲ್ಲ ತಕ್ಷಣ ಕೇಂದ್ರ ಸರ್ಕಾರ ಪರಿಹಾರ ಘೋಷಿಸಬೇಕು. ಕೇಂದ್ರ ತಾರತಮ್ಯ ಮಾಡುತ್ತಿಲ್ಲ ಎಂಬ ಭರವಸೆ ಮೂಡಿಸಲಿ ಎಂದರು.ಸಚಿವ ರೇವಣ್ಣ ಬಿಸ್ಕೆಟ್ ಎಸೆದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ ನನಗೆ ಘಟನೆ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಮಾಹಿತಿ ಇಲ್ಲದೆ ಪ್ರತಿಕ್ರಿಯೆ ನೀಡುವುದು ತಪ್ಪಿ. ಇದು ಆಕಸ್ಮಿಕವಾಗಿ ನಡೆದ ಘಟನೆ ಆಗಿರಬಹುದು, ಉದ್ದೇಶಪೂರ್ವಕವಾಗಿ ನಡೆದಂತಿಲ್ಲ ಎಂದರು.

Related posts

Leave a Reply