Header Ads
Breaking News

ಕೊಡಗಿನ ವ್ಯಕ್ತಿಗೆ ಕೊರೊನಾ ಸೋಂಕು ದೃಢ : ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್

ಕೊಡಗು ಜಿಲ್ಲಾ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‍ನಲ್ಲಿ ನಿಗಾ ವಹಿಸಲಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಟ್ವೀಟ್ ಮಾಡಿದ್ದಾರೆ. ಆ ವ್ಯಕ್ತಿ ಸೌದಿಯಿಂದ ಕೊಡಗಿಗೆ ವಾಪಸ್ಸಾಗಿದ್ದರು ಎನ್ನಲಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ನಾಲ್ವರು ಶಂಕಿತರು ಇದ್ದಾರೆ. ಅದರಲ್ಲಿ ಯಾರಿಗೆ ಸೋಂಕು ದೃಢವಾಗಿದೆ ಎಂಬ ಗೊಂದಲವಿದೆ. ಮಾಹಿತಿಗೆ ಜಿಲ್ಲಾಡಳಿತ ಪರದಾಡುತ್ತಿದೆ. ಸಚಿವರ ಟ್ವೀಟ್ ಬಳಿಕ ಜಿಲ್ಲಾಧಿಕಾರಿ ಹಾಗೂ ಡಿಎಚ್‍ಒ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬುಧವಾರ ಮತ್ತೊಬ್ಬ ವ್ಯಕ್ತಿಯ ವೈದ್ಯಕೀಯ ವರದಿ ಬಂದಿತ್ತು. ಅದು ನೆಗೆಟಿವ್ ಬಂದಿತ್ತು. ಮತ್ತೊಬ್ಬ ವ್ಯಕ್ತಿಯ ವೈದ್ಯಕೀಯ ವರದಿ ಪಾಸಿಟಿವ್ ಬಂದಿದ್ದು ಕೊಡಗಿನಲ್ಲೂ ಆತಂಕ ಮೂಡಿಸಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 22 ಬೆಡ್‍ನ ಪ್ರತ್ಯೇಕ ವಾರ್ಡ್ ಸಜ್ಜು ಮಾಡಲಾಗಿದೆ.ಈವರೆಗೂ ರಾಜ್ಯದಲ್ಲಿ ಪತ್ತೆಯಾಗಿರುವ 15ನೇ ಕೋವಿಡ್-19 ಪ್ರಕರಣ ಇದಾಗಿದೆ.

Related posts

Leave a Reply

Your email address will not be published. Required fields are marked *