Header Ads
Header Ads
Breaking News

ಕೊಡಗು ಕೇರಳದಲ್ಲಿ ಜಲಪ್ರಳಯ. ಅಗಲಿದ ಬಂಧುಗಳಿಗೆ ಶ್ರದ್ಧಾಂಜಲಿ. ಮೊಂಬತ್ತಿ ಬೆಳಗಿ ನುಡಿನಮನ.

ಕೊಡಗು ಜಿಲ್ಲೆ, ಕೇರಳ ರಾಜ್ಯದಲ್ಲಿ ಪ್ರಕೃತಿಯ ಮುನಿಸಿನಿಂದ ಸಾವಿರಾರು ಕುಟುಂಬಗಳು ಅತಂತ್ರರಾದವು ಬಹಳಷ್ಟು ನಾಗರಿಕರು ಅಗಲಿದರು. ಅಗಲಿದ ಬಂಧುಗಳ ಆತ್ಮಕ್ಕೆ ಚಿರಶಾಂತಿ ಕೋರಿ ಶೃದ್ದಾಂಜಲಿ ಕಾರ್ಯಕ್ರಮವನ್ನು ಉಡುಪಿ ಬಾಲಕಿಯ ಸರಕಾರಿ ಕಾಲೇಜು ಆಶ್ರಯದಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಯಿತು.ಮೃತರ ಆತ್ಮಸದ್ಗತಿಗಾಗಿ ವಿದ್ಯಾದೇಗುಲದಲ್ಲಿ ಸೇರಿದ 400 ಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿಗಳು ಮೊಂಬತ್ತಿ ಹಚ್ಚಿಸಿ ಶೃದ್ದಾಂಜಲಿ ಸಲ್ಲಿಸಿ ಮೌನ ಪ್ರಾರ್ಥನೆ ಸಲ್ಲಿಸಿದರು. ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರನಾಥ ಮೆಸ್ತ ಸಾಥ್ ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ರುದ್ರೇಗೌಡ , ವಿಶ್ವನಾಥ ಬಾಯರಿ, – ವಿದ್ಯಾರ್ಥಿ ಸಂಘದ ಸಂಚಾಲಕರರಾದ ಗಂಗಾಧರ,ಉಪನ್ಯಾಸಕರುಗಳಾದ ಯಾದವ್ ವಿ.ಕೆ, ಲಕ್ಷ್ಮೀಕಾಂತ್, ಕಿಶೋರ್, ಸಾಮಾಜಿಕ ಕಾರ್ಯಕರ್ತ ತಾರಾನಾಥ್ ಮೇಸ್ತ ಶಿರೂರು ಉಪಸ್ಥಿತರಿದ್ದರು.

Related posts

Leave a Reply