Header Ads
Header Ads
Breaking News

ಕೊಡಗು ಮತ್ತು ಕೇರಳ ನೆರೆ ಸಂತ್ರಸ್ತರಿಗೆ ನೆರವು ಸಹ್ಯಾದ್ರಿ ಕಾಲೇಜಿನವರಿಂದ ಪರಿಹಾರ ಸಾಮಾಗ್ರಿ ಕೊಡುಗೆ

ಕರ್ನಾಟಕದ ಕೊಡಗು ಮತ್ತು ಕೇರಳ ರಾಜ್ಯ ಜಲಪ್ರಳಯಕ್ಕೆ ತುತ್ತಾದ ಜನರಿಗೆ ಮಂಗಳೂರಿನ ಹೊರವಲಯದಲ್ಲಿರುವ ಅಡ್ಯಾರ್ ಸಹ್ಯಾದ್ರಿ ಕಾಲೇಜಿನವರು ನೆರವು ನೀಡಿದ್ದಾರೆ.ಕೊಡಗು ಮತ್ತು ಕೇರಳದ ಜನರು ಮಳೆ, ಪ್ರವಾಹ ಮತ್ತು ಭೂಕುಸಿತಗಳ ದುರಂತದಿಂದ ಶಿಬಿರಗಳಲ್ಲಿ ಇರುವ ಸಂತ್ರಸ್ತರಿಗೆ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್‌ನ ವಿದ್ಯಾರ್ಥಿಗಳು ಪರಿಹಾರ ಶಿಬಿರಗಳಿಗೆ ಅಗತ್ಯವಾದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ್ದಾರೆ. ಆಹಾರ ಪದಾರ್ಥಗಳು, ನೈರ್ಮಲ್ಯ ವಸ್ತುಗಳು, ಔಷಧಿಗಳು, ಹಾಸಿಗೆ ಹಾಳೆಗಳು, ಬಟ್ಟೆ, ನೀರಿನ ಬಾಟಲಿಗಳು, ಶೌಚಾಲಯಗಳು ಮತ್ತು ಶುಚಿಗೊಳಿಸುವ ವಸ್ತುಗಳನ್ನು ದಾನ ಮಾಡಿದ್ದಾರೆ ಸಹ್ಯಾದ್ರಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿವರ್ಗ. ಮಂಗಳೂರಿನ ಸಹ್ಯಾದ್ರಿ ವಿದ್ಯಾರ್ಥಿಗಳು ವಿಪತ್ತು ಪರಿಹಾರ ನಿಧಿಗಾಗಿ ರೂ. 1.6 ಲಕ್ಷ ನಗದು ನೀಡಿದ್ದಾರೆ. ಭಾರತೀಯ ಕೋಸ್ಟ್ ಗಾರ್ಡ್ಸ್ ಮೂಲಕ ಸಂಗ್ರಹಿಸಿದ ಪರಿಹಾರ ಸಾಮಗ್ರಿಗಳನ್ನು ಕೊಡಗು ಮತ್ತು ಕೇರಳದ ಪರಿಹಾರ ಶಿಬಿರಗಳಿಗೆ ಕಳುಹಿಸಲಾಗಿದೆ.

Related posts

Leave a Reply