Header Ads
Header Ads
Header Ads
Breaking News

ಕೊಡಿಪ್ಪಾಡಿ – ಅರ್ಕ – ಕಬಕ ರಸ್ತೆ ಅಭಿವೃದ್ಧಿ ಪಡಿಸದಿದ್ದಲ್ಲಿ ಪ್ರತಿಭಟನೆ ಎಚ್ಚರಿಕೆ ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರಿಂದ ನಿರ್ಧಾರ

 

ಪುತ್ತೂರು: ಕೊಡಿಪ್ಪಾಡಿ ರಸ್ತೆಯ ಅರ್ಕ, ಕಬಕದ ತನಕ ರಸ್ತೆ ಪೂರ್ಣ ಕೆಟ್ಟು ಹೋಗಿದೆ. ಈ ಕುರಿತು ಸಂಬಂಧಪಟ್ಟ ಶಾಸಕರಿಗೆ, ಜಿ.ಪಂ, ಗ್ರಾ.ಪಂ ಸೇರಿದಂತೆ ಇಲಾಖಾಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿನ ತನಕ ಯಾವುದೇ ಪ್ರಯೋಜವಾಗಿಲ್ಲ.

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಂದು ಸಾವಿರ ಕೋಟಿ ರೂಪಾಯಿಗಳ ಅನುದಾನ ತಂದಿರುವುದಾಗಿ ಪ್ರಚಾರ ಪ್ರೀಯ ಶಾಸಕರು ಟಾಂ ಟಾಂ ಮಾಡುತ್ತಾರೆ. ಜಿ.ಪಂ.ನಲ್ಲಿ ಅನುದಾನವಿಲ್ಲ ಶಾಸಕರು ಅನುದಾನ ಬಿಡುಗಡೆ ಮಾಡತ್ತಿಲ್ಲ ಎಂದು ಆರೋಪ ಮಾಡುತ್ತಾರೆ. ಇವರ ನಡುವೆ ನಮ್ಮ ಗ್ರಾಮ ಅಭಿವೃದ್ಧಿ ಕಾಣದೆ ಕಡೆಗಣಿಸಲ್ಪಟ್ಟಿವೆ.

ಈ ನಿಟ್ಟಿನಲ್ಲಿ ಮುಂದಿನ 15 ದಿನಗಳೊಳಗೆ ಕೊಡಿಪ್ಪಾಡಿ – ಅರ್ಕ – ಕಬಕದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳದೆ ಇದ್ದರೆ ಬೆಳಗ್ಗಿನಿಂದ ಸಂಜೆಯ ತನಕ ಪ್ರತಿಭಟನೆ ನಡೆಸಲಿದ್ದೇವೆ. ಇದಕ್ಕೂ ಸ್ಪಂಧನೆ ಸಿಗದಿದ್ದರೆ ಗ್ರಾಮ ವ್ಯಾಪ್ತಿಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಕೊಡಿಪ್ಪಾಡಿ ಗ್ರಾ.ಪಂ ಮಾಜಿ ಸದಸ್ಯ ಚಂದ್ರಶೇಖರ್ ಎ.ಎಸ್ ಹನಿಯೂರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕೊಡಿಪ್ಪಾಡಿಯ ನಿವಾಸಿಗಳಾದ ದಿನೇಶ್, ಸುಹಾಸ್, ತಿಲಕ್, ರಿಕ್ಷಾ ಚಾಲಕ ಮಣಿಕಾಂತ್, ಸೇರ ಬಾಲಕೃಷ್ಣ ಶೆಟ್ಟಿ, ಅಭಿಜೀತ್ ಉಪಸ್ಥಿತರಿದ್ದರು.

Related posts

Leave a Reply