Header Ads
Header Ads
Breaking News

ಮಾಣೂರು ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನಕ್ಕೆಕೊಡಿಮರದ ಭವ್ಯ ಮೆರವಣಿಗೆ.

ನೀರುಮಾರ್ಗ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನ ಮಾಣೂರು ದೇವಸ್ಥಾನದ ಧ್ವಜ ಸ್ತಂಭದ ಭವ್ಯ ಮೆರವಣಿಗೆಯು ಡಿಸೆಂಬರ್ 31 ರಂದು ಅದ್ದೂರಿಯಾಗಿ ನಡೆಯಿತು.

ಪಡು ಪೆಲತ್ತಡಿ ದಿ. ಲೋಕಯ್ಯ ಪೂಜಾರಿ ಸ್ಮರಣಾರ್ಥ ಅವರ ಸುಪುತ್ರ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಕುಟುಂಬಸ್ಥರಿಂದ ಮಾಣೂರು ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದರು.ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಕಮಲಾ ದೇವಿ ಆಸ್ರಣ್ಣ ಅವರು ದೀಪ ಬೆಳಗಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು ಬಳಿಕ ಮಾತನಾಡಿದ ಅವರು ಪದ್ಮನಾಭ ಕೋಟ್ಯಾನ್‌ರವರು ಅತ್ಯಂತ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನೂ ಅನೇಕ ದೇವರ ಸೇವೆ ಮಾಡುವ ಶಕ್ತಿ ಒದಗಿಸಲಿ ಎಂದು ಶುಭ ಹಾರೈಸಿದರು.ಇನ್ನು ಸುಳ್ಯದಿಂದ ಆಗಮಿಸಿದ ಈ ಕೊಡಿ ಮರದ ಮೆರವಣಿಗೆಗೆ ಭಕ್ತಾಧಿಗಳು ಸಾಕ್ಷಿಯಾದರು . ಚೆಂಡೆ, ವಾದ್ಯ, ವಿವಿಧ ವೇಷಭೂಷಣ, ಕಲಾ ಶಿಲ್ಪಾ ತಂಡಗಳ ಮೆರುಗಿನೊಂದಿಗೆ ಹೊರಟ ಮೆರವಣಿಗೆಯು ರಂಗಪಾದೆ, ಕೆಂಪುಗುಡ್ಡೆ, ಅಡ್ಯಾರ್ ಪದವು ಮುಖೇನ ಶ್ರೀ ಕ್ಷೇತ್ರದ ದೇವರ ಸನ್ನಿಧಿಗೆ ಸಾಗಿಬಂತು.
ಈ ಸಂದರ್ಭದಲ್ಲಿ ಮಾಜಿ ಉಸ್ತುವಾರಿ ಸಚಿವ ರಮಾನಾಥ ರೈ, ರಾಜ್ಯ ಧಾರ್ಮಿಕ ಸದಸ್ಯರಾದ ಕೆ ಜಿ ಶ್ರೀಧರ ತಂತ್ರಿ, ಶ್ರೀನಿವಾಸ ಭಟ್, ಬೊಳ್ಮಾರ ಗುತ್ತು , ರಾಜ್ಯ ಇಂಟಕ್ ಅಧ್ಯಕ್ಷರಾದ ರಾಕೇಶ್ ಮಲ್ಲಿ, ಶಶಿಧರ್ ಭಟ್ ಬೊಳ್ಮಾರ ಗುತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply