Header Ads
Header Ads
Breaking News

ಕೊಡಿಯಾಲ್‌ಬೈಲ್ ಶಾರದ ವಿದ್ಯಾಲಯದಲ್ಲಿ ಆಹಾರೋತ್ಸವ, ಯೋಗ-ಪ್ರಕೃತಿ ಚಿಕಿತ್ಸಾ ಶಿಬಿರ, ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ.

ಆಹಾರೋತ್ಸವ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ, ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವು ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಶಾರದ ವಿದ್ಯಾಲಯದಲ್ಲಿ ತಲಪಾಡಿಯ ಶಾರದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಪುತ್ತೂರಿನ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಎಸ್.ಡಿ.ಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಬಿ ಶ್ರೀನಿವಾಸ್ ಆಚಾರ್ಯ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪ್ರಖ್ಯಾತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞ ಉಡುಪಿಯ ಡಾ ಮಹಮ್ಮದ್ ರಫೀಕ್‌ರವರು ನಿತ್ಯ ಜೀವನದಲ್ಲಿ ಆಹಾರ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮಹತ್ವ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ ಎಂ. ಬಿ. ಪುರಾಣಿಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ಸರಸ್ವತೀ ಚಾರಿಟೇಬಲ್ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಮಂಗಳೂರು ಕ್ಯಾಂಪ್ಕೋದ ಅಧ್ಯಕ್ಷ ಎಸ್ ಆರ್ ಸತೀಶ್ ಚಂದ್ರ ಆಗಮಿಸಿದ್ದರು. ಶಾರದಾ ಆಯುರ್ವೇದ ಆಸ್ಪತ್ರೆಯ ಹಿರಿಯ ವೈಧ್ಯರಾದ ಡಾ ರಾಜೇಶ್ ಪಾದೆಕಲ್ಲು ಮಾತನಾಡಿ ಈ ಆಹಾರೀತ್ಸವದಲ್ಲಿ ದಿನನಿತ್ಯ ನಮ್ಮ ಜೀವನದಲ್ಲಿ ಯಾವ ಆಹಾರವನ್ನು ಯಾವ ರೀತಿ ಸೇವಿಸಬೇಕು ! ಸಿರಿಧಾನ್ಯಗಳಿಂದ ಯಾವೆಲ್ಲ ಪದಾರ್ಥಗಳನ್ನು ಮಾಡಬಹುದು ಎಂಬುದನ್ನು ತಿಳಿಸಲಾಗುತ್ತದೆ ಎಂದರು.ಶಿಬಿರದಲ್ಲಿ ಸಾವಯವ ಉತ್ಪನ್ನಗಳ ಮಾರಾಟ, ತಜ್ಞ ವೈದ್ಯರಿಂದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಪಾಸಣೆ ಹಾಗೂ ಉಚಿತ ಔಷಧಿಗಳ ವಿತರಣೆ, ಪ್ರಕೃತಿ ಚಿಕಿತ್ಸಾ ಆಹಾರದ ವೈವಿದ್ಯತೆಗಳ ತಯಾರಿ ವಿಧಾನ ಹಾಗೂ ಅವುಗಳನ್ನು ಸವಿಯುವ ಅವಕಾಶ, ಖಾದಿ ಭಂಢಾರ, ಮಾರಾಟ ಮಳಿಗೆಗಳು ಶಿಬಿರದಲ್ಲಿ ವಿಶೇಷತೆಗಳಾಗಿದ್ದವು

Related posts

Leave a Reply