Header Ads
Header Ads
Breaking News

ಕೊಡುವುದರಲ್ಲಿ ಅಡಗಿದೆ ನಿಜವಾದ ಪ್ರೀತಿ : ಉಡುಪಿ ಧರ್ಮ ಪ್ರಾಂತ್ಯದ ಧರ್ಮ ಗುರು ಐಸಾಕ್ ಲೋಬೋ ಅಭಿಪ್ರಾಯ

ಕಾರ್ಕಳ : ನಿಜವಾದ ಪ್ರೀತಿ ಪಡೆಯುವುದಕ್ಕಿಂತ ಕೊಡುವುದರಲ್ಲಿ ಅಡಗಿದೆ. ದೇವರ ಪ್ರೀತಿ ಅಗಾದತೆಯಲ್ಲಿ ಬೆಳೆಯುವಂತಾಗ ಬೇಕು ಪ್ರೀತಿಯೊಂದಿಗೆ ಶಾಂತಿ ಸಮಾಧಾನವನ್ನು ನಮ್ಮ ಮನೆಮನಗಳಲ್ಲಿ ನೆನೆಯಬೇಕು ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮ ಗುರುಗಳಾದ ಬಿಷಪ್ ಡಾ ಜೆರಾಲ್ಡ್ ಐಸಾಕ್ ಲೋಬೋ ಹೇಳಿದ್ದಾರೆ.

ಅವರು ಗುರುವಾರ ಅತ್ತೂರು ಸಂತ್ ಲಾರೆನ್ಸ್ ಬೆಸಿಲಿಕಾದಲ್ಲಿ ಜನಪತ್ರಿನಿಧಿ, ಅಧಿಕಾರಿಗಳು ಪತ್ರಕರ್ತ ಮಿತ್ರರೊಂದಿಗೆ ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಅಚರಣೆಯ ಪ್ರಯುಕ್ತ ಹಮ್ಮಿಕೊಂಡ ಸೌಹಾರ್ದ ಕೂಟ ಸಹಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ ಭಾರತ ಒಂದು ಸುಂದರವಾದ ಹೂ ತೋಟ ಇಲ್ಲಿನ29 ರಾಜ್ಯಗಳಲ್ಲಿ ಮೂರು ಸಾವಿರ ಜಾತಿಗಳು12ಪ್ರಮುಖ ಧರ್ಮಗಳು ಜತೆಯಾಗಿ ಸೌಹಾರ್ದಯುತವಾಗಿ ಬಾಳುತ್ತಿರುವುದು ಇಲ್ಲಿನ ವೈಶಿಷ್ಟ್ಯವಾಗಿದೆ ಎಂದರು.

ಜಾನ್ ಡಿಸಿಲ್ವಾ ಮಾತನಾಡಿ ಜನವರಿಯಲ್ಲಿ ನಡೆಯಲಿರುವ ಬೆಸಿಲಿಕಾ ಮಹೋತ್ಸವದ ಕುರಿತಂತೆ ಮಾಹಿತಿ ನೀಡಿದರು. ಈ ಸಂದರ್ಭ ಸಂತೋಷ್ ಡಿಸಿಲ್ವಾ, ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾ ಧರ್ಮಗುರುಗಳಾದ ವಂ ದಾ ಜೋರ್ಜ್ ಡಿಸೋಜಾ, ಶಾಸಕ ವಿ ಸುನಿಲ್, ಮಾಜಿ ಶಾಸಕ ಗೋಪಾಲ್ ಭಂಡಾರಿ, ಜಿಲ್ಲಾ ಪಂಚಾಯತ್ ಸದಸ್ಯೆ ರೇಶ್ಮಾ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply