Header Ads
Header Ads
Header Ads
Breaking News

ಕೊಡ್ಮಾಣ್- ಬಾರೆಕಾಡು ಸಂಪರ್ಕಿಸುವ ರಸ್ತೆ ಕಾಂಕ್ರೀಟಿಕರಣಕ್ಕೆ ಚಾಲನೆ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಶಿಲಾನ್ಯಾಸ

ಬಂಟ್ವಾಳದ ತಾಲೂಕಿನ ಕೊಡ್ಮಾಣ್‌ನಿಂದ ಬಾರೆಕಾಡು ಸಂಪರ್ಕಿಸುವ ರಸ್ತೆ ಕಾಂಕ್ರೀಟಿಕರಣಕ್ಕೆ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಅವರು ವಿ೪ ನ್ಯೂಸ್‌ನೊಂದಿಗೆ ಮಾತನಾಡಿ, ಸುಮಾರು ೧೨ ಲಕ್ಷ ರುಪಾಯಿ ವೆಚ್ಚದಲ್ಲಿ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಗುತ್ತಿದೆ. ಚುನಾವಣಾ ಪೂರ್ವದಲ್ಲಿ ಇಲ್ಲಿನ ರಸ್ತೆಯನ್ನು ಅಭಿವೃದ್ದಿ ಪಡಿಸುವ ಬಗ್ಗೆ ಜನರಿಗೆ ನೀಡಿದ ಭರವಸಂತೆಯಂತೆ ಸುಸಜ್ಜಿತ ಹಾಗೂ ಶಾಶ್ವತ ರಸ್ತೆಯನ್ನು ಈ ಭಾಗದ ಜನರಿಗೆ ಒದಗಿಸಿಕೊಡಲಾಗುತ್ತಿದೆ ಎಂದರು. ಕೊಡ್ಮಾಣ್ ಗ್ರಾಮದ ಪೊನ್ನೋಡಿ ರಸ್ತೆಗೂ ಅನುದಾನ ಬಿಡುಗಡೆಯಾಗಿದ್ದು ಶೀಘ್ರ ಅಭಿವೃದ್ದಿ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.

ಇದೇ ಸಂದರ್ಭ ಸಚಿವರು ಫರಂಗಿಪೇಟೆಯ ಹತ್ತನೇ ಮೈಲು ಬಳಿ ಹೈಮಾಸ್ಕ್ ವಿದ್ಯುತ್ ದೀಪ ಹಾಗೂ ತುಂಬೆಯ ಮುಯಿನಾಬಾದ್ ಬಳಿ ೧೦ ಲಕ್ಷ ರುಪಾಯಿ ವೆಚ್ಚದ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ ನೆರವೇರಿಸಿದರು.ಈ ವೇಳೆ ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ಮಂಗಳೂರು ತಾ.ಪಂ.ಅಧ್ಯಕ್ಷ ಮಹಮ್ಮದ್ ಮೋನು, ಪುದು ಗ್ರಾ.ಪಂ.ಉಪಾಧ್ಯಕ್ಷ ಹಾಸೀರ್ ಪೇರಿಮಾರ್ ಮತ್ತಿತರರು ಹಾಜರಿದ್ದರು

Related posts

Leave a Reply