Header Ads
Header Ads
Breaking News

ಕೊಣಾಜೆಯಲ್ಲಿ ಗಸ್ತು ಸದಸ್ಯರ ಸಭೆ

ಉಳ್ಳಾಲ: ವಿದೇಶಗಳಲ್ಲಿರುವಂತೆ ದೇಶದ ಪೊಲೀಸ್ ಇಲಾಖೆಗಳಲ್ಲಿಯೂ ಸುಧಾರಿತ ವ್ಯವಸ್ಥೆ ಜಾರಿಯಾಗಬೇಕಿದ್ದು, ಇದರಿಂದ ಪೊಲೀಸರು ಸಮಯ ಪಾಲನೆಯ ಜತೆಗೆ ಕರ್ತವ್ಯಗಳಲ್ಲಿಯೂ ಯಶಸ್ವಿಯಾಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಕೆ.ಬೈರಪ್ಪ ಅಭಿಪ್ರಾಯಪಟ್ಟರು.

ಅವರು ಕೊಣಾಜೆ ಪೊಲೀಸ್ ಠಾಣೆ ವತಿಯಿಂದ ಕೊಣಾಜೆಯ ಮಂಗಳ ಆಡಿಟೋರಿಯಂನಲ್ಲಿ ಜರಗಿದ ಸುಧಾರಿತ ಗಸ್ತು ವ್ಯವಸ್ಥೆ ಕೊಣಾಜೆ ವ್ಯಾಪ್ತಿಯ ಸರ್ವ ಗಸ್ತು ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ಸಹಾಯಕ ಪೊಲೀಸ್ ಆಯುಕ್ತ ರಾಮ ರಾವ್ ಮಾತನಾಡಿ ‘ ಕೇಂದ್ರ ಸರಕಾರದ ಯೋಜನೆಯಂತೆ ಮಂಗಳೂರು ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವುದರಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಿ.ಸಿ.ಟಿವಿಯನ್ನು ಅಳವಡಿಸುವ ಭರವಸೆ ಸಿಕ್ಕಿದೆ. ಈಗಾಗಲೇ ಇಲಾಖೆಯಿಂದ ಕ್ಯಾಮರಾ ಅಳವಡಿಸುವ ಪ್ರದೇಶಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದರು.

ಠಾಣಾಧಿಕಾರಿ ಅಶೋಕ್ ಮಾತನಾಡಿ ೧೨ ಗ್ರಾಮಗಳಲ್ಲಿ ೪೨ ಬೀಟ್ ಗಳನ್ನು ರಚಿಸಲಾಗಿದೆ. ಗ್ರಾಮಸ್ಥರು ಯಾವುದೇ ಸಮಸ್ಯೆ ಅಥವಾ ಮಾಹಿತಿಯಿದ್ದಲ್ಲಿ ಪ್ರದೇಶಕ್ಕೆ ಸಂಬಂಧಿಸಿದ ವ್ಯಕ್ತಿಯಲ್ಲಿ ತಿಳಿಸಬಹುದು. ಈ ಮೂಲಕ ಅಪರಾಧಿ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯ ಎಂದರು.
ಈ ಸಂದರ್ಭ ಎಸ್.ಐ ಸುಕುಮಾರನ್ ಉಪಸ್ಥಿತರಿದ್ದರು.

Related posts

Leave a Reply