Header Ads
Breaking News

ಕೊಣಾಜೆಯ ಕಲ್ಲರಕೋಡಿ ಶಾಲೆಗೆ ನುಗ್ಗಿದ ಕಳ್ಳರು:ಶಾಲೆಯ ಕಚೇರಿಯ ಕಪಾಟಿನೊಳಗಿದ್ದ ನಗದು ದೋಚಿ ಪರಾರಿ

ಕೊಣಾಜೆ ಠಾಣಾ ವ್ಯಾಪ್ತಿಯ ನರಿಂಗಾನದ ಕಲ್ಲರಕೋಡಿ ಶಾಲೆಗೆ ನುಗ್ಗಿದ ಕಳ್ಳರು ನಗದ ದೋಚಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ನರಿಂಗಾನ ಗ್ರಾಮದ ಕಲ್ಲರಕೋಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ರಾತ್ರಿ ಕಳ್ಳರು ನುಗ್ಗಿದ್ದಾರೆ ಎನ್ನಲಾಗಿದೆ. ಶಾಲಾ ಕಚೇರಿಯ ಬಾಗಿಲು ಮುರಿದು ಒಳ ನುಗ್ಗಿ ಕಪಾಟುಗಳನ್ನು ಒಡೆದು ಚಲ್ಲಾಪಿಲ್ಲಿಗೈದಿದ್ದಾರೆ. ಅಲ್ಲದೆ ಕಪಾಟಿನೊಳಗಿದ್ದ ನಗದನ್ನು ದೋಚಿ, ಮುಖ್ಯ ಶಿಕ್ಷಕಿ ಶಾಲೆಯಲ್ಲಿ ಬಿಟ್ಟು ಹೋಗಿದ್ದ ಮೊಬೈಲ್ ಕೂಡಾ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ. ಕೊರೋನಾ ವೈರಸ್ ಭೀತಿಯ ಕಾರಣ ಕಳೆದ ಕೆಲವು ದಿನಗಳಿಂದ ಶಾಲೆಗೆ ರಜಾ ಸಾರಲಾಗಿದ್ದು, ಆದರೆ ಶಿಕ್ಷಕಿಯರು ಬಂದು ಕಾರ್ಯನಿರ್ವಹಿಸಿ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಶನಿವಾರ ಬೆಳಗ್ಗೆ ಮುಖ್ಯ ಶಿಕ್ಷಕಿ ಶಾಲೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

Related posts

Leave a Reply

Your email address will not be published. Required fields are marked *